ಟಿ.ಸಂಜೀವ ರಾವ್ ನಿಧನ

ಲೋಕಬಂಧು ನ್ಯೂಸ್ | ಕುಂದಾಪುರ, ಆ.28
ಬಿ.ಎಸ್.ಎಲ್.ಎನ್. ನಿವೃತ್ತ ಎಜಿಎಂ ತೋನ್ಸೆ ಸಂಜೀವ ರಾವ್ (91) ಗುರುವಾರ ಇಲ್ಲಿನ ‌ ಆಸ್ಪತ್ರೆಯಲ್ಲಿ ವಯೋ ಸಹಜ ಕಾಯಿಲೆಯಿಂದ ನಿಧನರಾದರು.
ಟೆಲಿಫೋನ್ ಇಲಾಖೆಯಲ್ಲಿ ನಿಷ್ಠಾವಂತ ಇಂಜಿನಿಯರ್ ಆಗಿ, ಅಧಿಕಾರಿಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ದೀರ್ಘ ಕಾಲ ಪೆನ್ಷನರ್ಸ್ ಅಸೋಸಿಯೇಷನ್ ನ ಪದಾಧಿಕಾರಿಯಾಗಿದ್ದರು.


ಸಂಗೀತದಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಅವರು ಉಡುಪಿಯ ಹೆಚ್ಚಿನ ಸಂಘಟನೆಗಳ ಆಜೀವ ಸದಸ್ಯರಾಗಿದ್ದರು.


ಸಹೃದಯಿ, ಸಜ್ಜನ ಪ್ರೇಕ್ಷಕರಾಗಿ ಹೆಚ್ಚಿನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕಲಾವಿದರನ್ನು ಸಂಸ್ಥೆಗಳನ್ನು ಪ್ರೋತ್ಸಾಹಿಸುತ್ತಿದ್ದರು.


ಮೃತರಿಗೆ ಓರ್ವ ಪುತ್ರ,ಈರ್ವರು ಪುತ್ರಿಯರು ಇದ್ದಾರೆ.

ಯಕ್ಷಗಾನ ಕಲಾರಂಗದ ಆಜೀವ ಸದಸ್ಯರಾಗಿದ್ದ ಅವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್ ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.