ಲೋಕಬಂಧು ನ್ಯೂಸ್ | ಉಡುಪಿ, ಆ.29
ನಗರಸಭೆ ವ್ಯಾಪ್ತಿಯ ನಿಟ್ಟೂರು ವಾರ್ಡ್'ನ ಪಡುನಿಟ್ಟೂರು ಭಾಗದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಅಂಗನವಾಡಿ ಕಟ್ಟಡ ಕಾಮಗಾರಿಗೆ ಶಾಸಕ ಯಶಪಾಲ್ ಸುವರ್ಣ ಶನಿವಾರ ಶಿಲಾನ್ಯಾಸ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಪಡುನಿಟ್ಟೂರು ಭಾಗದ ಸಾರ್ವಜನಿಕರ ಹಲವು ವರ್ಷಗಳ ಬೇಡಿಕೆಯಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ನೂತನ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿದ್ದು, ಶೀಘ್ರದಲ್ಲಿಯೇ ಅಂಗನವಾಡಿ ಲೋಕಾರ್ಪಣೆಗೊಂಡು ಸ್ಥಳೀಯ ಪುಟಾಣಿಗಳಿಗೆ ಶಿಕ್ಷಣದ ಜೊತೆಗೆ ಪೌಷ್ಟಿಕ ಆಹಾರ ಒದಗಿಸಲು ಸಹಕಾರಿಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಸದಸ್ಯ ಸಂತೋಷ್ ಜತ್ತನ್, ಸ್ಥಳೀಯರಾದ ಅಣ್ಣಪ್ಪ ಸನಿಲ್, ಜಗದೀಶ್ ಶೆಟ್ಟಿ, ರಂಜನ್ ಶೆಟ್ಟಿ, ನವೀನ್ ಸನಿಲ್, ಪ್ರಸಾದ್ ಶೆಟ್ಟಿ, ಪ್ರಜ್ವಲ್, ಅರವಿಂದ, ಅಶ್ವಿನ್ ಕುಂದರ್, ದಿನೇಶ್ ಜತ್ತನ್ ಮತ್ತು ಸುರೇಂದ್ರ, ಅಂಗನವಾಡಿ ಶಿಕ್ಷಕಿ ರೇವತಿ, ಸುರೇಖ, ಜಯಶ್ರೀ ಮೊದಲಾದವರಿದ್ದರು.
