ಲೋಕಬಂಧು ನ್ಯೂಸ್ | ಉಡುಪಿ, ಆ.22
ಕಡಿಯಾಳಿಯ ಉಡುಪಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವಜ್ರಮಹೋತ್ಸವ (60ನೇ ವರ್ಷ)ದ ಆಮಂತ್ರಣ ಪತ್ರಿಕೆಯನ್ನು ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು.
ಸ್ವರ್ಣ ಜ್ಯುವೆಲ್ಲರ್ಸ್'ನ ಗುಜ್ಜಾಡಿ ರಾಮದಾಸ್ ನಾಯಕ್ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ, ತಮ್ಮ ತಂದೆ ಗುಜ್ಜಾಡಿ ನರಸಿಂಹ ನಾಯಕ್ ಅವರು ಉಡುಪಿ ಗಣೇಶೋತ್ಸವಕ್ಕೆ ಸೇವೆ ನೀಡುತ್ತಾ ಬಂದಿದ್ದರು. ಅದನ್ನು ನಾವೂ ಮುಂದುವರಿಸುತ್ತೇವೆ ಎಂದರು.
ಪಟ್ಲ ರೂರಲ್ ಎಜುಕೇಶನ್ ಸೊಸೈಟಿ ಅಧ್ಯಕ್ಷ ಪೆರ್ಣಂಕಿಲ ಶ್ರೀಶ ನಾಯಕ್ ಮಾತನಾಡಿ, ಉಡುಪಿ ಗಣೇಶೋತ್ಸವ ಮೆರವಣಿಗೆ ಮೈಸೂರು ದಸದಾ ಮೆರವಣಿಗೆ ರೀತಿ ನಡೆಯುತ್ತಿದ್ದು, ಕರ್ನಾಟಕದ ಜನ ಉಡುಪಿಯತ್ತ ತಿರುಗಿ ನೋಡುವಂತಾಗಿದೆ ಎಂದರು.
ವಿಶಿಷ್ಟ ಶೈಲಿಯಲ್ಲಿ 60ನೇ ವರ್ಷದ ಗಣೇಶ ವೇದಿಕೆ ನಿರ್ಮಿಸಲಾಗುತ್ತಿದ್ದು, ಗಣೇಶನ ಮೂರ್ತಿ ಇಡುವ ಪಕ್ಕದಲ್ಲಿ ಏಕಕಾಲದಲ್ಲಿ 300 ಜನ ಕುಳಿತು ಧ್ಯಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸಭಾಂಗಣದ ಒಳಭಾಗದಲ್ಲಿ ವಾಸ್ತು ವಿನ್ಯಾಸ ಒಳಗೊಂಡ ಮಂಟಪ ನಿರ್ಮಿಸಲಾಗುವುದು ಎಂದು ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ಕಿಣಿ ತಿಳಿಸಿದರು.
ಉಡುಪಿಯ ರಾಜ ದರ್ಬಾರ್ ಹಾಲ್, ಗಣೇಶೋತ್ಸವ ವೇದಿಕೆ ಸಭಾಂಗಣದ ಚಿತ್ರಗಳನ್ನು ಅನಾವರಣಗೊಳಿಸಲಾಯಿತು.
ವಜ್ರಮಹೋತ್ಸವ ಸಮಿತಿ ಅಧ್ಯಕ್ಷ ಡಾ.ಕಟ್ಟೆ ರವಿರಾಜ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.
ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ.ವಸಂತ ಭಟ್, ಕೋಶಾಧಿಕಾರಿ ವಲ್ಲಭ ಭಟ್, ಅರ್ಚಕ ಮುರಳಿಕೃಷ್ಣ, ವಜ್ರಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಗಿರೀಶ್ ಎಂ.ಅಂಚನ್, ಕೋಶಾಧಿಕಾರಿ ಮಂಜುನಾಥ್ ಹೆಬ್ಬಾರ್, ನಗರಸಭೆ ಮಾಜಿ ಸದಸ್ಯೆ ಗೀತಾ ಶೇಟ್ ಉಪಸ್ಥಿತರಿದ್ದರು.
.jpg)
.jpg)