ಗದಾತೀರ್ಥ ಆವರಣ ಗೋಡೆ ಉದ್ಘಾಟನೆ

ಲೋಕಬಂಧು ನ್ಯೂಸ್ | ಕಾಪು, ಆ.16
ಪರಶುರಾಮ ದೇವರಿಂದ ಕುಂಜಾರುಗಿರಿಯಲ್ಲಿ ನಿರ್ಮಿತವಾದ 4 ತೀರ್ಥಗಳಲ್ಲೊಂದಾದ ಪರಶುರಾಮ ದೇವಸ್ಥಾನದ ಬೆಟ್ಟದ ತಪ್ಪಲಲ್ಲಿರುವ ಗದಾತೀರ್ಥಕ್ಕೆ ದಾನಿಗಳ ಸಹಕಾರದಿಂದ ಗಿರಿಬಳಗದವರು ನಿರ್ಮಿಸಿರುವ ಆವರಣ ಗೋಡೆ ಮತ್ತು ಭಾರ್ಗವ ರಾಮ ದೇವರ ವಿಗ್ರಹವನ್ನು ಅದಮಾರು ಹಿರಿಯ ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ದುರ್ಗಾದೇವಿ ಹಾಗೂ ಪರಶುರಾಮ ದೇವರ ತೀರ್ಥ ಪ್ರೋಕ್ಷಣೆ ಮೂಲಕ ಭಾನುವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ದುರ್ಗಾದೇವಿ ದೇವಸ್ಥಾನದ ಅರ್ಚಕ ರಾಘವೇಂದ್ರ ಭಟ್, ಪರಶುರಾಮ ದೇವಸ್ಥಾನದ ಅರ್ಚಕ ವಿನಯಪ್ರಸಾದ್ ಭಟ್, ಬಳಗದ ಅಧ್ಯಕ್ಷ ಪರಶುರಾಮ ಭಟ್, ಕಾರ್ಯದರ್ಶಿ ಸುಪ್ರೀತ್ ತಂತ್ರಿ, ಉಪಾಧ್ಯಕ್ಷ ಪಟ್ಟಾಭಿರಾಮ ಆಚಾರ್ಯ, ಹಿರಿಯರಾದ ರಾಜಮೂರ್ತಿ ಭಟ್, ಲಕ್ಷ್ಮೀನಾರಾಯಣ ತಂತ್ರಿ ಮೊದಲಾದವರಿದ್ದರು.