ಉಡುಪಿ ಉಚ್ಚಿಲ ದಸರಾ: ಆ.30ರಂದು ವಿಗ್ರಹ ರಚನೆಗೆ ಮುಹೂರ್ತ

ಲೋಕಬಂಧು ನ್ಯೂಸ್ | ಪಡುಬಿದ್ರಿ, ಆ.28
ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಉಚ್ಚಿಲ ವ್ಯವಸ್ಥಾಪಕತ್ವದ ಶ್ರೀಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಅಕ್ಟೋಬರ್ 11ರಿಂದ 21ರ ವರೆಗೆ ನಡೆಯುವ ಉಡುಪಿ ಉಚ್ಚಿಲ ದಸರಾ ಮಹೋತ್ಸವದಲ್ಲಿ ಪ್ರತಿಷ್ಠಾಪಿಸಲ್ಪಡುವ ಶ್ರೀ ಶಾರದಾ ಮಾತೆ ಹಾಗೂ ನವದುರ್ಗೆಯರ ವಿಗ್ರಹ ರಚನೆಯ ಮುಹೂರ್ತ ಆ.30ರಂದು ಬೆಳಗ್ಗೆ 9.45ಕ್ಕೆ ನೆರವೇರಲಿದೆ.
ಪ್ರಸಕ್ತ ಸಾಲಿನ ದಸರಾ ಮಹೋತ್ಸವ 5ನೇ ವರ್ಷದ್ದಾಗಿದ್ದು ಶಿಸ್ತುಬದ್ಧವಾಗಿ ಸಂಭ್ರಮದಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ಮಹೋತ್ಸವದ ರೂವಾರಿ ಡಾ.ಜಿ.ಶಂಕರ್‌ ಹಾಗೂ ಮೊಗವೀರ ಮಹಾಜನ ಸಂಘ ಅಧ್ಯಕ್ಷ ಜಯ ಸಿ.ಕೋಟ್ಯಾನ್ ಬೆಳ್ಳಂಪಳ್ಳಿ ತಿಳಿಸಿದ್ದಾರೆ.