ಭಗವತಿ ಟೂರಿಸ್ಟ್ ಮಾಲಕ ವಿನಯ ರಾಜ್ ನಿಧನ

ಲೋಕಬಂಧು ನ್ಯೂಸ್ | ಉಡುಪಿ, ಆ.10
ನಗರದ ಸರ್ವಿಸ್ ಬಸ್ ನಿಲ್ದಾಣದ ಬಳಿಯ 'ಭಗವತಿ ಟೂರಿಸ್ಟ್' ಬಸ್ ಬುಕ್ಕಿಂಗ್ ಸಂಸ್ಥೆಯ ಮಾಲೀಕ, ಸಾಮಾಜಿಕ ಧುರೀಣ ವಿನಯ್ ರಾಜ್ (51) ಅವರು ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ನಿಧನರಾದರು.
ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.


ಕಳೆದ ಮೂರು ದಶಕಗಳಿಂದ ಟೂರಿಸ್ಟ್ ಬಸ್ ಬುಕ್ಕಿಂಗ್ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿದ್ದ ವಿನಯ್ ರಾಜ್ ಅವರು, ಉಡುಪಿಯ ಸಾರಿಗೆ ವಲಯದಲ್ಲಿ ಚಿರಪರಿಚಿತರಾಗಿದ್ದರು.


ವ್ಯವಹಾರದ ಜೊತೆಗೆ ಸಾಮಾಜಿಕ ಹಾಗೂ ಧಾರ್ಮಿಕ ರಂಗದಲ್ಲೂ ಸಕ್ರಿಯರಾಗಿದ್ದ ಅವರು, ಟೂರಿಸ್ಟ್ ಹಾಗೂ ಸರ್ವೀಸ್ ಬಸ್ ಸಂಘದ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ದೀರ್ಘಕಾಲದ ಕೋಶಾಧಿಕಾರಿಯಾಗಿ ಮತ್ತು ಅಧ್ಯಕ್ಷರಾಗಿಯೂ ದಕ್ಷತೆಯಿಂದ ಸೇವೆ ಸಲ್ಲಿಸಿದ್ದರು.


ಮೃತರು ತಾಯಿ, ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.