ಲೋಕಬಂಧು ನ್ಯೂಸ್ | ಉಡುಪಿ, ಆ.28
ಶ್ರಾವಣ ಮಾಸದ ಹುಣ್ಣಿಮೆ (ನೂಲಹುಣ್ಣಿಮೆ) ಶುಕ್ರವಾರದಂದು ಪರ್ಯಾಯ ಶೀರೂರು ಮಠ ಆಶ್ರಯದಲ್ಲಿ ಕೃಷ್ಣ ಮಠದಲ್ಲಿ ಯಜುರುಪಾಕರ್ಮ ನಡೆಯಿತು.
ಅನೇಕ ಮಂದಿ ವಿಪ್ರರು ಋಷಿ- ಪಿತೃ ತರ್ಪಣ, ಹೋಮ ಇತ್ಯಾದಿ ಧಾರ್ಮಿಕ ವಿಧಿ ಬಳಿಕ ನೂತನ ಯಜ್ಞೋಪವೀತ ಧಾರಣೆ ಮಾಡಿದರು.
ಚಂದ್ರಮೌಳೀಶ್ವರ ದೇವಳ
ಮನೋಹರ ತಂತ್ರಿ ನೇತೃತ್ವದಲ್ಲಿ ಉಡುಪಿ ರಥಬೀದಿಯ ಶ್ರೀ ಚಂದ್ರಮೌಳೀಶ್ವರ ದೇವಾಲಯದಲ್ಲಿ ಯಜುರ್ವೇದೀಯ ಉಪಾಕರ್ಮ ನೆರವೇರಿತು.ವಿವಿಧ ಬಗೆಯ ಸ್ನಾನವಿಧಿಗಳ ತರುವಾಯ ಋಷಿ- ಪಿತೃ ತರ್ಪಣ ನೀಡಿ, ಹೋಮ ನಡೆಸಿ ಗಾಯತ್ರಿ ಮಂತ್ರದ ಅಭಿಮಂತ್ರಣದೊಂದಿಗೆ ನೂತನ ಯಜ್ಞೋಪವೀತ ಧಾರಣೆ ಮಾಡಲಾಯಿತು.
ಮುಚ್ಲುಕೋಡು ದೇವಸ್ಥಾನದಲ್ಲಿಯೂ ಯಜುರುಪಾಕರ್ಮ ನಡೆಯಿತು.

.jpg)
.jpg)