ಲೋಕಬಂಧು ನ್ಯೂಸ್ | ಉಡುಪಿ, ಆ.23
ಪರ್ಯಾಯ ಶೀರೂರು ಶ್ರೀಕೃಷ್ಣ ಮಠ ಆಶ್ರಯದಲ್ಲಿ ಸೆಪ್ಟೆಂಬರ್ 4 ಮತ್ತು 5ರಂದು ನಡೆಯುವ ಶ್ರೀಕೃಷ್ಣ ಜನ್ಮಾಷ್ಟಮಿ- ವಿಟ್ಲಪಿಂಡಿ ಮಹೋತ್ಸವ ಅಂಗವಾಗಿ ಶ್ರೀಕೃಷ್ಣಮಠದ ಕನಕ ಗೋಪುರದ ಬಳಿ ವಿಟ್ಲಪಿಂಡಿ ಸಂದರ್ಭದಲ್ಲಿ ಮೊಸರು ಕುಡಿಕೆಯ ಕಂಬ ಮುಹೂರ್ತ ಭಾನುವಾರ ನಡೆಯಿತು.
ಶೀರೂರು ಮಠದ ಪಾರುಪತ್ಯೆಗಾರ ಶ್ರೀಶ ಭಟ್ ಕಡೆಕಾರು ಹಾಗೂ ಕೃಷ್ಣ ಮಠದ ಕೊಟ್ಟಾರಿ ರಾಮ ಕೊಡಂಚ ಮೊದಲಾದವರಿದ್ದರು.
