ಲೋಕಬಂಧು ನ್ಯೂಸ್ | ಪಡುಬಿದ್ರಿ
ದ.ಕ. ಮೊಗವೀರ ಮಹಾಜನ ಸಂಘ ಆಶ್ರಯದಲ್ಲಿ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಿ ಸನ್ನಿಧಿಯಲ್ಲಿ ನಡೆಯುವ ಉಡುಪಿ- ಉಚ್ಚಿಲ ದಸರಾ ಮಹೋತ್ಸವದಲ್ಲಿ ಉಡುಪಿ ಮತ್ತು ದ.ಕ. ಜಿಲ್ಲೆಗಳಲ್ಲಿ ಕುಸ್ತಿ ಕ್ರೀಡೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಉಭಯ ಜಿಲ್ಲೆಗಳನ್ನೊಳಗೊಂಡ ವಿವಿಧ ದೇಹ ತೂಕ ವಿಭಾಗಗಳಲ್ಲಿ ಕುಸ್ತಿ ಸ್ಪರ್ಧೆ ಏರ್ಪಡಿಸಲಾಗಿದೆ.
ಪುರುಷರ ವಿಭಾಗದಲ್ಲಿ 'ಉಚ್ಚಿಲ ದಸರಾ ಕೇಸರಿ' ಮತ್ತು 'ಉಚ್ಚಿಲ ದಸರಾ ಕುಮಾರ್' ಪ್ರಶಸ್ತಿ ವಿಭಾಗ ಹಾಗೂ ಮಹಿಳೆಯರ ವಿಭಾಗದಲ್ಲಿ 'ಉಚ್ಚಿಲ ದಸರಾ ಕುವರಿ' ವಿಭಾಗಗಳಲ್ಲಿ ಅಕ್ಟೋಬರ್ 13ರಂದು ಬೆಳಿಗ್ಗೆ 8 ಗಂಟೆಯಿಂದ ಉಚ್ಚಿಲ ದೇವಳದ ಎದುರು ಸ್ಪರ್ಧೆ ನಡೆಯಲಿದೆ.
ಸ್ಪರ್ಧೆಯ ತೂಕದ ವಿವರ
ಪುರುಷರ ವಿಭಾಗ: 34ರಿಂದ 38, 41 ಕೆಜಿ, 46 ಕೆಜಿ, 50 ಕೆಜಿ, 57 ಕೆಜಿ, 61 ಕೆಜಿ, 65 ಕೆಜಿ.
ಉಚ್ಚಿಲ ಕುಮಾರ್- 74 ಕೆಜಿ, ಉಚ್ಚಿಲ ದಸರಾ ಕೇಸರಿ- 86 ಕೆಜಿ, 86 ಕೆಜಿಯಿಂದ 97 ಕೆಜಿ
ಮಹಿಳಾ ವಿಭಾಗ: 32ರಿಂದ 36 ಕೆಜಿ, 43 ಕೆಜಿ,46 ಕೆಜಿ, 53 ಕೆಜಿ., ಉಚ್ಚಿಲ ದಸರಾ ಕುವರಿ- 59 ಕೆಜಿ, 65 ಕೆಜಿ, 68 ಕೆಜಿ, 68ರಿಂದ 76 ಕೆಜಿ.
ಅವಿಭಜಿತ ದ.ಕ. ಜಿಲ್ಲೆಯಲ್ಲಿ ಜನಿಸಿದ ಕುಸ್ತಿ ಪಟುಗಳಿಗೆ ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ. ಇತರ ಜಿಲ್ಲೆಗಳ ಕ್ರೀಡಾ ಪಟುಗಳಿಗೆ ಅವಕಾಶವಿಲ್ಲ. ಪ್ರತಿಯೊಬ್ಬ ಕುಸ್ತಿ ಪಟು ತನ್ನ ಮೂಲ ಆಧಾರ್ ಕಾರ್ಡ್ ಹಾಗೂ ಪಾಸ್‌ಪೋರ್ಟ್ ಅಳತೆಯ ಫೋಟ ತರಬೇಕು. ಪ್ರತೀ ವಿಭಾಗದಲ್ಲಿ ವಿಜೇತ ಮೂರು ಕುಸ್ತಿ ಸ್ಪರ್ಧಾಳುಗಳಿಗೆ ಮಾತ್ರ ಪದಕ, ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ನೀಡಲಾಗುವುದು.
ಸ್ಪರ್ಧಾಳುಗಳ ದೇಹದ ತೂಕವನ್ನು ಅ.12ರಂದು ಅಪರಾಹ್ನ 2.30ರಿಂದ ಸಂಜೆ ಗಂಟೆ 6ರ ತನಕ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ವಿಜಯ ಸುವರ್ಣ (9731052556) ಅವರನ್ನು ಸಂಪರ್ಕಿಸುವಂತೆ ಸಂಘಟಕರ ಪ್ರಕಟಣೆ ತಿಳಿಸಿದೆ.
