ಆತಂಕ ಬೇಡ, ಕ್ಷೇಮವಾಗಿದ್ದೇವೆ

ಲೋಕಬಂಧು ನ್ಯೂಸ್ | ಹುಬ್ಬಳ್ಳಿ
ಕಾರು ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಉತ್ತರಾದಿ ಮಠದ‌ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ, ಆತಂಕ ಬೇಡ; ನಾವು ಕ್ಷೇಮವಾಗಿದ್ದೇವೆ ಎಂಬ ಸಂದೇಶವನ್ನು ಶ್ರೀಮಠದ ಭಕ್ತರು ಹಾಗೂ ಅಭಿಮಾನಿಗಳಿಗೆ ತಿಳಿಸಿದ್ದಾರೆ.
ಚಾತುರ್ಮಾಸ್ಯ ಪೂರೈಸಿ ತೆರಳುತ್ತಿದ್ದ ವೇಳೆ ತಾವು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು ಗುರುಗಳು ಹಾಗೂ ಮೂಲರಾಮನ ಆಶೀರ್ವಾದದಿಂದ ಯಾವುದೇ ಗಂಭೀರ ಅಪಾಯವಾಗಿಲ್ಲ.
ವೈದ್ಯರೂ ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದ್ದಾರೆ. ಹಾಗಾಗಿ ಯಾರೂ ಆತಂಕಪಡಬೇಕಾಗಿಲ್ಲ. ಭಗವಂತನನ್ನು ಪ್ರಾರ್ಥಿಸಿ ಎಂದು ತಿಳಿಸಿದ್ದಾರೆ.