ಬ್ಯಾಂಕ್ ಖಾತೆಯಿಂದ 4 ಲಕ್ಷ ವಂಚನೆ

ಲೋಕಬಂಧು ನ್ಯೂಸ್ | ಉಡುಪಿ, ಸೆ.11
ಖಾಸಗಿ ಬ್ಯಾಂಕ್ ಶಾಖೆಯೊಂದರಿಂದ ಇನ್ನೊಂದು ಬ್ಯಾಂಕ್‌ಗೆ 6 ಲಕ್ಷ ರೂ. ವರ್ಗಾವಣೆ ಮಾಡಲು ಬ್ಯಾಂಕ್‌ಗೆ ತೆರಳಿ ದಾಖಲೆಗಳಿಗೆ ಸಹಿ ಮಾಡಿ ಹಿಂತಿರುಗಿದ ವ್ಯಕ್ತಿಯ ಖಾತೆಯಿಂದ ಸೈಬರ್ ಕಳ್ಳರು 4.40 ಲಕ್ಷ ರೂ. ಎಗರಿಸಿದ ಘಟನೆ ಬಗ್ಗೆ ಪ್ರಕರಣ ದಾಖಲಾಗಿದೆ.
ಉಡುಪಿಯ ವಿಠಲ (76) ಎಂಬವರು ಖಾಸಗಿ ಬ್ಯಾಂಕ್‌ನ ಅಲೆವೂರು ಶಾಖೆಯಲ್ಲಿ 6 ಲಕ್ಷ ರೂ. ಹಣ ಇಟ್ಟಿದ್ದು, ಅದನ್ನು ಇನ್ನೊಂದು ಬ್ಯಾಂಕ್ಗೆ ವರ್ಗಾವಣೆ ಮಾಡಲು ಜೂ.22ರಂದು ಬ್ಯಾಂಕಿಗೆ ತೆರಳಿ ಉಪ ಶಾಖಾಧಿಕಾರಿಯಲ್ಲಿ ತಿಳಿಸಿ ದಾಖಲೆಗಳಿಗೆ ಸಹಿ ಮಾಡಿ ಬಂದಿದ್ದರು.


ಆನಂತರ ಕಾರಣಾಂತರಗಳಿಂದ ಮಗಳ ಮನೆಯಾದ ವಿಶಾಖಪಟ್ಟಣಕ್ಕೆ ತೆರಳಿದ್ದು, ಸೆ.8ರಂದು ಮತ್ತೆ ಹಳೆಯ ಬ್ಯಾಂಕ್‌ಗೆ ತೆರಳಿ ವಿಚಾರಿಸಿದಾಗ ಉಳಿತಾಯ ಖಾತೆಯಿಂದ 4.40 ಲಕ್ಷ ರೂ. ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿದ್ದು, ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.