ಲೋಕಬಂಧು ನ್ಯೂಸ್ | ಉಡುಪಿ, ಸೆ.6
ಪರ್ಯಾಯ ಶೀರೂರು ಶ್ರೀಕೃಷ್ಣ ಮಠ ಆಶ್ರಯದಲ್ಲಿ ಶನಿವಾರ ನಡೆದ ವಿಟ್ಲಪಿಂಡಿ ಮಹೋತ್ಸವ ಸಂದರ್ಭದಲ್ಲಿ ಯುವ ಬ್ರಾಹ್ಮಣ ಪರಿಷತ್ (ವೈಬಿಪಿ) ವತಿಯಿಂದ ಉಚಿತ ಮಜ್ಜಿಗೆ ವಿತರಿಸಲಾಯಿತು.
ಪೇಜಾವರ ಮಠ ಮುಂಭಾಗದಲ್ಲಿ ನಡೆದ ಕಾರ್ಯಕ್ರಮವನ್ನು ಪರ್ಯಾಯ ಶೀರೂರು ಮಠದ ದಿವಾನ ಡಾ.ಉದಯಕುಮಾರ್ ಸರಳತ್ತಾಯ ಅವರು ಮಜ್ಜಿಗೆ ವಿತರಿಸುವ ಮೂಲಕ ಚಾಲನೆ ನೀಡಿ, ಭಕ್ತರ ತೃಷೆ ತಣಿಸುವ ಕಾಯಕವೂ ಕೃಷ್ಣ ಸೇವೆಯೇ ಆಗಿದೆ. ಆರೋಗ್ಯಕರ ಮಜ್ಜಿಗೆ ವಿತರಣೆ ಕಾರ್ಯ ಶ್ಲಾಘನೀಯ ಎಂದರು.
ವೈಬಿಪಿ ಅಧ್ಯಕ್ಷ ಕೆ.ರಘುಪತಿ ರಾವ್ ಕಿನ್ನಿಮೂಲ್ಕಿ, ಕಾರ್ಯದರ್ಶಿ ಅಮಿತಾ ಕ್ರಮಧಾರಿ, ಮಾಜಿ ಅಧ್ಯಕ್ಷರಾದ ಚೈತನ್ಯ ಎಂ.ಜಿ. ಮತ್ತು ಚಂದ್ರಕಾಂತ್ ಕೆ.ಎನ್., ರವೀಂದ್ರ ಆಚಾರ್ಯ ಮೊದಲಾದವರಿದ್ದರು.
ಈ ಬಾರಿ ಮಹೋತ್ಸವ ಸಂದರ್ಭದಲ್ಲಿ ಭಾರಿ ಬಿಸಿಲು ಇದ್ದು, ಬಾಯಾರಿದವರಿಗೆ ತಂಪು ನೀಡಿತು. ಈ ನಿಟ್ಟಿನಲ್ಲಿ ವೈಬಿಪಿ ಸದಸ್ಯರ ಮಜ್ಜಿಗೆ ವಿತರಣೆ ಕಾರ್ಯ ಸರ್ವತ್ರ ಮೆಚ್ಚುಗೆಗೆ ಪಾತ್ರವಾಯಿತು.
.jpg)
.jpg)
.jpg)