ಲೋಕಬಂಧು ನ್ಯೂಸ್ | ಉಡುಪಿ
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಉಡುಪಿ ನಗರ ವತಿಯಿಂದ ಕಡಿಯಾಳಿ ಕಾತ್ಯಾಯಿನಿ ಮಂಟಪದಲ್ಲಿ ನಗರದ ಅಭ್ಯಾಸ ವರ್ಗ ನಡೆಯಿತು.
ಮಣಿಪಾಲದ ಮುನಿಯಾಲು ಆಯುರ್ವೇದ ಕಾಲೇಜು ಪ್ರಾಚಾರ್ಯ ಡಾ.ಸತ್ಯನಾರಾಯಣ ಭಟ್ ಉದ್ಘಾಟಿಸಿ, ವಿದ್ಯಾರ್ಥಿ ದೆಸೆಯಲ್ಲಿಯೇ ನಾಯಕತ್ವ ಗುಣ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮಂಗಳೂರು ವಿಭಾಗ ಎಸ್ಎಫ್.ಡಿ ಸಂಯೋಜಕ ಅನಂತ ಕೃಷ್ಣ, ಉಡುಪಿ ಜಿಲ್ಲಾ ಸಂಚಾಲಕ ರಂಜಿತ್ ಸಿದ್ದಾಪುರ, ತಾಲೂಕು ವಿದ್ಯಾರ್ಥಿನಿ ಪ್ರಮುಖ್ ನಿಹಾರಿಕಾ ಪೈ ಉಪಸ್ಥಿತರಿದ್ದರು.
ಸೈದ್ಧಾಂತಿಕ ಭೂಮಿಕೆಯನ್ನು ಡಾ.ಶಿವಾನಂದ ನಾಯಕ್, ಕ್ಯಾಂಪಸ್ ಕಾರ್ಯವನ್ನು ರಾಜ್ಯ ಸಹ ಕಾರ್ಯದರ್ಶಿ ಸುವಿತ್ ಶೆಟ್ಟಿ ಹಾಗೂ ಪ್ರಶಿಕ್ಷಣವನ್ನು ಹಿರಿಯ ಕಾರ್ಯಕರ್ತ ಅಜಿತ್ ಜೋಗಿ ನಡೆಸಿದರು.
ಸಮಾರೋಪ ಸಮಾರಂಭದಲ್ಲಿ 2026-27ನೇ ಸಾಲಿನ ಕಾರ್ಯದರ್ಶಿಯ ಜವಾಬ್ದಾರಿಯನ್ನು ಸಂಚಿತ್ ಶೆಟ್ಟಿ ಅವರಿಗೆ ವಹಿಸಿಕೊಡಲಾಯಿತು. ಅಧ್ಯಕ್ಷ ಪ್ರವೀಣ್ ಆಚಾರ್ಯ ಇದ್ದರು.

