ಲೋಕಬಂಧು ನ್ಯೂಸ್ l ಉಡುಪಿ
ಇಲ್ಲಿನ ಚಿಟ್ಪಾಡಿ ಹನುಮಾನ್ ಪೆಟ್ರೋಲ್ ಬಂಕ್‌ನ ಹಿಂಭಾಗದಲ್ಲಿ ನಿಲ್ಲಿಸಲಾಗಿದ್ದ ಶ್ರೀ ದುರ್ಗಾಂಬಾ ಬಸ್‌ವೊಂದು ಕಳವಾಗಿದ್ದು, ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳೆಗುಂಡಿ ಸಮೀಪ ಪತ್ತೆಯಾಗಿದೆ.ಶ್ರೀ ದುರ್ಗಾಂಬಾ ಬಸ್‌ನ ನಿರ್ವಾಹಕ ಕೃಷ್ಣ (51) ಹಾಗೂ ಚಾಲಕ ರಾಯಿನ್ ಉಚ್ಚಿಲ ಅವರು ಸೆ.28ರಂದು ರಾತ್ರಿ ಬಸ್‌ನ್ನು ಹನುಮಾನ್ ಪೆಟ್ರೋಲ್ ಬಂಕ್‌ನ ಹಿಂಭಾಗದಲ್ಲಿ ನಿಲ್ಲಿಸಿದ್ದರು. ಬಳಿಕ ರಾತ್ರಿ 10 ಗಂಟೆ ಸುಮಾರಿಗೆ ಇಬ್ಬರೂ ಸ್ಕೂಟರ್‌ನಲ್ಲಿ ಅಲ್ಲಿಂದ ತೆರಳಿದ್ದರು.
ಸೆ.29ರಂದು ಬೆಳಗ್ಗೆ ಎಂದಿನಂತೆ ಬಸ್ ನಿಲ್ಲಿಸಿದ್ದ ಸ್ಥಳಕ್ಕೆ ಬಂದಾಗ ಬಸ್ ಕಾಣೆಯಾಗಿರುವುದು ಗಮನಕ್ಕೆ ಬಂದಿದ್ದು, ಉಡುಪಿ ನಗರ ಪೊಲೀಸ್ ಠಾಣೆಗೆ ಕೃಷ್ಣ ದೂರು ನೀಡಿದ್ದರು.
ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು ಕಳವಾಗಿದ್ದ ಬಸ್‌ನ್ನು ಶಿರ್ವ ಠಾಣಾ ವ್ಯಾಪ್ತಿಯ ಬಾಳೆಗುಂಡಿ ಸಮೀಪ ಪತ್ತೆಹಚ್ಚಿದ್ದಾರೆ. ಉಡುಪಿ ನಗರ ಠಾಣೆ ಪೊಲೀಸರು ಬಸ್‌ನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದು, ಬಸ್ ಕಳವು ಮಾಡಿದ ಆರೋಪಿಗಳ ಪತ್ತೆಯಾಗಿಲ್ಲ. ತನಿಖೆ ಮುಂದುವರಿದಿದೆ.