ಲೋಕಬಂಧು ನ್ಯೂಸ್ | ಉಡುಪಿ, ಸೆ.5
ಪರ್ಯಾಯ ಶೀರೂರು ಶ್ರೀಕೃಷ್ಣ ಮಠ ಆಶ್ರಯದಲ್ಲಿ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ಎಸ್.ಕೆ.ಪಿ.ಎ.) ಉಡುಪಿ ವಲಯ ಮತ್ತು ಲಯನ್ಸ್ ಕ್ಲಬ್ ಮುನಿಯಾಲು ಆಯೋಜಿಸಿದ ಕಲರ್ಸ್ ಆಫ್ ಶ್ರೀಕೃಷ್ಣ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯ ಜೆರ್ಸಿಯನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ಮುಖ್ಯ ಆಯುಕ್ತ ಜಯಕರ ಶೆಟ್ಟಿ ಇಂದ್ರಾಳಿ ಶನಿವಾರ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಎಸ್.ಕೆ.ಪಿ.ಎ. ಉಡುಪಿ ವಲಯ ಅಧ್ಯಕ್ಷ ದಿವಾಕರ್ ಹಿರಿಯಡ್ಕ, ಕಾರ್ಯದರ್ಶಿ ಅಶೋಕ್ ದೊಂಡೇರಂಗಡಿ, ಮಾಜಿ ಅಧ್ಯಕ್ಷ ಜನಾರ್ದನ್ ಕೊಡವೂರು, ಪ್ರಕಾಶ್ ಕೊಡoಕೂರು, ಚಂದ್ರಶೇಖರ್ ಹಿರಿಯಡ್ಕ, ಎಂ.ಎಸ್. ಮಂಜು ಮೊದಲಾದವರಿದ್ದರು.
