ನಾಗರಿಕ ಸಮಿತಿಯಿಂದ ಚಕ್ಕುಲಿ ವಿತರಣೆ

ಲೋಕಬಂಧು ನ್ಯೂಸ್ ಉಡುಪಿ, ಸೆ.6
ವಿಟ್ಲಪಿಂಡಿ ಉತ್ಸವ ಸಂದರ್ಭದಲ್ಲಿ ಶೀರೂರು ಲಕ್ಷ್ಮೀವರತೀರ್ಥ ಶ್ರೀಪಾದರ ಸವಿನೆನಪಿಗಾಗಿ ಉಡುಪಿ ಜಿಲ್ಲಾ ನಾಗರಿಕ ಸಮಿತಿ ವತಿಯಿಂದ ಪ್ರತಿವರ್ಷದಂತೆ ಈ ಬಾರಿಯೂ ಶನಿವಾರ ಸಾರ್ವಜನಿಕರಿಗೆ ಉಚಿತ ಚಕ್ಕುಲಿ ವಿತರಿಸಲಾಯಿತು.
ನಾಗರಿಕ ಸಮಿತಿ ಕಚೇರಿ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಕ್ಷ್ಮೀವರತೀರ್ಥ ಶ್ರೀಪಾದರ ಪೂರ್ವಾಶ್ರಮದ ಸಹೋದರ ಲಾತವ್ಯ ಆಚಾರ್ಯ ಮಾತನಾಡಿ, ನಾಗರಿಕ ಸಮಿತಿ ಹಲವಾರು ವರ್ಷಗಳಿಂದ ಸಾರ್ವಜನಿಕರಿಗೆ ಚಕ್ಕುಲಿ ವಿತರಿಸುವ ಮೂಲಕ ಅಷ್ಟಮಿ ಹಬ್ಬವನ್ನು ಸ್ಮರಣೀಯವಾಗಿಸುತ್ತಿದೆ ಎಂದರು.


ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ `ಸಹಕಾರ ರತ್ನ' ಜಯಕರ ಶೆಟ್ಟಿ ಇಂದ್ರಾಳಿ, ಈ ಮಾದರಿ ಸ್ಮರಣೀಯ ಕಾರ್ಯ ಮುಂದೆಯೂ ನಡೆಯಲಿ ಎಂದು ಆಶಿಸಿದರು.


ನಾಗರಿಕ ಸಮಿತಿ ಅಧ್ಯಕ್ಷ ನಾಗೇಶ್ ಹೆಗ್ಡೆ, ಸಮಿತಿ ಸಂಚಾಲಕ ನಿತ್ಯಾನಂದ ಒಳಕಾಡು, ಉದ್ಯಮಿ ಭಾಸ್ಕರ್ ಶೇರಿಗಾರ್, ಗೀತಾ ನಾಗೇಶ್ ಹೆಗ್ಡೆ, ರಾಘವೇಂದ್ರ ಪ್ರಭು ಕರ್ವಾಲು, ವಿಕಾಸ್ ಶೆಟ್ಟಿ, ಗಂಗಾಧರ್, ವಾಸುದೇವ, ಶಂಕರ್ ನಾಯಕ್, ಸುಮಾ ಆಚಾರ್, ದೇವಕಿ ಬಾರ್ಕೂರು ಮೊದಲಾದವರಿದ್ದರು.


ಸುಮಾರು 10 ಸಾವಿರ ಚಕ್ಕುಲಿ ವಿತರಿಸಲಾಗಿದ್ದು, ಶಂಕರ್ ನಾಯಕ್ ತಂಡ ಸ್ಥಳದಲ್ಲೇ ಚಕ್ಕುಲಿ ತಯಾರಿಸಿದರು.