ಲೋಕಬಂಧು ನ್ಯೂಸ್ ಕಾರ್ಕಳ, ಸೆ.7
ಮಿಯ್ಯಾರು ಲವ ಕುಶ ಜೋಡುಕರೆ ಕಂಬಳ ಕ್ರೀಡಾಂಗಣದಲ್ಲಿ ಕರ್ನಾಟಕ ಯುವಜನ ಮತ್ತು ಕ್ರೀಡಾ ಪ್ರಾಧಿಕಾರದಿಂದ ಮಾನ್ಯತೆ ಪಡೆದ ರಾಜ್ಯ ಕಂಬಳ ಅಸೋಸಿಯೇಷನ್ ಹಾಗೂ ಜಿಲ್ಲಾ ಕಂಬಳ ಸಮಿತಿ ಸಂಯುಕ್ತ ಆಶ್ರಯದಲ್ಲಿ ಪ್ರಥಮ ವರ್ಷದ ಕಂಬಳ ಓಟದ ತರಬೇತಿ ಶಿಬಿರವನ್ನು ಶಾಸಕ ವಿ.ಸುನಿಲ್ ಕುಮಾರ್ ಉದ್ಘಾಟಿಸಿ, ರಾಜ್ಯ ಕಂಬಳ ಸಮಿತಿಯ ಧ್ವಜಾರೋಹಣ ಮಾಡಿದರು.ಬಳಿಕ ಮಾತನಾಡಿದ ಅವರು ಕಂಬಳ, ದಿನದಿಂದ ದಿನಕ್ಕೆ ಕಂಬಳ ಪ್ರಸಿದ್ಧಿ ಪಡೆಯುತ್ತಿದ್ದು ಕಂಬಳದ ಕೋಣಗಳ ಸಂಖ್ಯೆ, ಕೋಣಗಳ ಯಜಮಾನರ ಸಂಖ್ಯೆಯೂ ಜಾಸ್ತಿಯಾಗಿದೆ. ಅದೇ ಪ್ರಮಾಣದಲ್ಲಿ ಕಂಬಳ ಓಟಗಾರರ ಸಂಖ್ಯೆ ಕೂಡಾ ಜಾಸ್ತಿಯಾಗಬೇಕಿದೆ. ಆ ನಿಟ್ಟಿನಲ್ಲಿ ರಾಜ್ಯ ಕಂಬಳ ಅಸೋಸಿಯೇಷನ್ ಕಂಬಳ ಓಟಗಾರರ ತರಬೇತಿ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಕಂಬಳ ಓಟದ ತರಬೇತಿ ಶಿಬಿರದ ಸಂರಕ್ಷಕರಾದ ಎರ್ಮಾಳ್ ರೋಹಿತ್ ಕುಮಾರ್ ಹೆಗ್ಡೆ, ಪ್ರವೀಣಚಂದ್ರ ಆಳ್ವ, ಯೋಗೀಶ್ ಶೆಟ್ಟಿ ಮತ್ತು ಸಂದೀಪ್ ಶೆಟ್ಟಿ,ವನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ಮಂಗಳೂರು ಟ್ರಸ್ಟಿ ಸುನಿಲ್ ಕುಮಾರ್ ಬಜಗೋಳಿ, ಕುಕ್ಕುಂದೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಅಂತೋನಿ ಡಿ'ಸೋಜ ನಕ್ರೆ, ರಾಜ್ಯ ಕಂಬಳ ಸಮಿತಿ ಕಾರ್ಯದರ್ಶಿ ವಿಜಯ ಕುಮಾರ್ ಕಂಗಿನಮನೆ, ಶೈಲೇಶ್ ಅರಿಗ ಹಿನಪ್ಪಾಡಿ, ದಿವಾಕರ್ ಜೈನ್, ಕಿರಣ್ ಬಲಿಪ, ವಿಶ್ವನಾಥ್ ಶೆಟ್ಟಿ, ಚಂದ್ರಹಾಸ ಸಾಧು ಸನಿಲ್ ಮತ್ತು ಮಿಯ್ಯಾರು ಮಹಾಲಿಂಗೇಶ್ವರ ದೇವಸ್ಥಾನ ಮೊಕ್ತೇಸರ ತಾರಾನಾಥ್ ಕೋಟ್ಯಾನ್, ತರಬೇತುದಾರರಾದ ಶಾಂತಾರಾಮ್, ವಸಂತ್ ಜೋಗಿ, ಅಶೋಕ್ ಕುಮಾರ್ ಜೈನ್ ಈದು, ದಿನೇಶ್ ಕಕ್ಕೆಪದವು ಮತ್ತು ವಿದ್ಯಾಧರ್ ಇದ್ದರು.
ಸುಮಾರು 214 ಕಂಬಳ ಓಟದ ಶಿಬಿರಾರ್ಥಿಗಳು ಭಾಗವಹಿಸಿದ್ದರು