ಲೋಕಬಂಧು ನ್ಯೂಸ್ ಮಲ್ಪೆ
ಇಲ್ಲಿಗೆ ಸಮೀಪದ ಬಾಬುತೋಟದಲ್ಲಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿರುವ ಘಟನೆ ಮಂಗಳವಾರ ನಡೆದಿದೆ.ಆಂಧ್ರಪ್ರದೇಶದ ಪರಮೇಶ್ ಮೃತರಾದವರಾಗಿದ್ದು, ಗುಜರಿ ಹೆಕ್ಕುವ ಕೆಲಸ ಮಾಡುತ್ತಿದ್ದರು.
ಅವರು ಪ್ರತಿದಿನ ಮಲಗುವ ಜಾಗದಲ್ಲಿಯೇ ಕೊಲೆಯಾಗಿರುವುದು ಕಂಡುಬಂದಿದೆ.
ಮಲ್ಪೆ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.