ಲೋಕಬಂಧು ನ್ಯೂಸ್ | ಮಣಿಪಾಲ, ಸೆ.25
ಪರೀಕದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಪೋಷಣಾ ಸಪ್ತಾಹ ಅಂಗವಾಗಿ ನ್ಯೂಟ್ರೀಷಿಯನ್ ಡಯಟ್ ಬಗ್ಗೆ ಕಾರ್ಯಕ್ರಮ ಆಸ್ಪತ್ರೆಯ ಕ್ಷೇಮ ಹಾಲ್‌ನಲ್ಲಿ ನಡೆಯಿತು.
ಮಣಿಪಾಲ ಮಾಹೆಯ ಡಯಟ್ ಮತ್ತು ನ್ಯೂಟ್ರೀಷನ್ ವಿಭಾಗದ ಮುಖ್ಯಸ್ಥೆ ಡಾ.ಸುವರ್ಣ ಹೆಬ್ಬಾರ್ ಪಥ್ಯಾಹಾರದ ಬಗ್ಗೆ ವಿವರಿಸಿದರು. ಮನುಷ್ಯನಿಗೆ ಪ್ರಸ್ತುತ ಒತ್ತಡ ಭರಿತ ಜೀವನದಲ್ಲಿ ಆಹಾರ ಹೇಗೆ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ತಿಳಿಸಿ ಕಾಲಕ್ಕನುಗುಣವಾಗಿ ಸಿಗುವ ಹಣ್ಣು ಹಂಪಲು, ತರಕಾರಿ ಹಾಗೂ ವಾತಾವರಣವನ್ನು ಹೊಂದಿಕೊಂಡು ಸಿಗುವ ಆಹಾರವನ್ನು ಸೇವಿಸುವ ಅಗತ್ಯತೆಯನ್ನು ತಿಳಿಸಿದರು.
ಸಾಧಕರ ಪ್ರಶ್ನೆಗಳಿಗೆ ಉತ್ತರಿಸಿದರು.
ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಗೋಪಾಲ್ ಪೂಜಾರಿ ನ್ಯೂಟ್ರಿಷಿಯನ್ ದಿನದ ಮಹತ್ವ ತಿಳಿಸಿದರು.
ಸ್ಥಾನಿಕ ವೈದ್ಯಾಧಿಕಾರಿ ಡಾ.ಶೋಭಿತ್ ಶೆಟ್ಟಿ, ವ್ಯವಸ್ಥಾಪಕ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.
ಸಂಸ್ಥೆ ವತಿಯಿಂದ ಡಾ.ಸುವರ್ಣ ಹೆಬ್ಬಾರ್ ಅವರನ್ನು ಗೌರವಿಸಲಾಯಿತು.
ಸೌಖ್ಯವನದ ಡಯಟೀಷಿಯನ್ ಡಾ.ಅನ್ವಿತ ಸ್ವಾಗತಿಸಿ, ಡಾ.ಅಜಿತ್ ವಂದಿಸಿದರು.
