ಶ್ರೀಕೃಷ್ಣನಿಗೆ ಕೋಟಿ ತುಳಸಿ ಅರ್ಚನೆ

ಲೋಕಬಂಧು ನ್ಯೂಸ್ | ಉಡುಪಿ, ಸೆ.6
ಪರ್ಯಾಯ ಶೀರೂರು ಮಠ‌ ಆಶ್ರಯದಲ್ಲಿ ಭಾನುವಾರ ಉಡುಪಿ ಶ್ರೀಕೃಷ್ಣ ಮಠದಲ್ಲಿ ಕೋಟಿ ತುಳಸಿ ಅರ್ಚನೆ ನಡೆಯಿತು.
ಲೋಕ ಕಲ್ಯಾಣಾರ್ಥವಾಗಿ ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಶ್ರೀಕೃಷ್ಣನಿಗೆ ತುಳಸಿ ಅರ್ಚನೆ ನಡೆಸಿ, ಮಹಾಪೂಜೆ ನೆರವೇರಿಸಿದರು.
ರಾಜಾಂಗಣದಲ್ಲಿ ವಿಪ್ರಬಂಧುಗಳಿಂದ ವಿಷ್ಣು ಸಹಸ್ರನಾಮ ಪಠನೆ ನಡೆಯಿತು.
ಮಠದ ದಿವಾನ ಡಾ.ಉದಯಕುಮಾರ್ ಸರಳತ್ತಾಯ, ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ‌ಶ್ರೀಕಾಂತ ಉಪಾಧ್ಯಾಯ ಮೊದಲಾದವರಿದ್ದರು.