ಲೋಕಬಂಧು ನ್ಯೂಸ್ | ಬೈಂದೂರು, ಸೆ.23
ಕಾಲ್ತೋಡು ಗ್ರಾಮದ ಬ್ಯಾಟಿಯಾಣಿ ಎಂಬಲ್ಲಿ ಅಕ್ರಮವಾಗಿ ಕೆಂಪುಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಕಾಲ್ತೋಡು ಬೀಟ್ ಅಧಿಕಾರಿ ನೀಡಿದ ಮಾಹಿತಿ ಮೇರೆಗೆ ಬೈಂದೂರು ಠಾಣೆಯ ಪಿ.ಎಸ್.ಐ. ಸುನಿಲ್ ಕುಮಾರ್ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗಳೊಂದಿಗೆ ದಾಳಿ ನಡೆಸಿದರು.
ಗಣಿಗಾರಿಕೆ ಸ್ಥಳದಲ್ಲಿದ್ದ ಕೆಂಪುಕಲ್ಲು ತುಂಬಿದ 2 ಟಿಪ್ಪರ್‌ಗಳು, ಬ್ಲೇಡ್ ಅಳವಡಿಸಿರುವ 2 ಪವರ್ ಟಿಲ್ಲರ್ ಮೆಷಿನ್‌ಗಳು ಹಾಗೂ 2 ಕಲ್ಲು ಎತ್ತುವ ಟ್ರಾಲಿ ಮೆಷಿನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ರವೀಂದ್ರ ಪೂಜಾರಿ ಮತ್ತು ಸತೀಶ್ ಶೆಟ್ಟಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.
.jpg)
.jpg)
.jpg)