ಲೋಕಬಂಧು ನ್ಯೂಸ್ | ಉಡುಪಿ, ಸೆ.20
'ಉಡುಪಿಯ ರಾಜ' ಖ್ಯಾತಿಯ ಕಡಿಯಾಳಿಯ ಉಡುಪಿ ಸಾರ್ವಜನಿಕ ಗಣೇಶೋತ್ಸವದ ಸಂಕಷ್ಟಹರ ಗಣಪತಿ ವಿಗ್ರಹದ ಜಲಸ್ತಂಭನ ಭಾನುವಾರ ರಾತ್ರಿ ಮಲ್ಪೆಯ ಸೀ ವಾಕ್ ಬಳಿ ನಡೆದಿದ್ದು, ವಿಸರ್ಜನಾ ಮೆರವಣಿಗೆ ಕಡಿಯಾಳಿಯಿಂದ ಆರಂಭಗೊಂಡಿತು.
ಕಲ್ಸಂಕ, ಕೃಷ್ಣಮಠ ಸಹಿತ ಉಡುಪಿಯ ವಿವಿಧ ಮಾರ್ಗಗಳ ಮೂಲಕ ಸಾಗಿತು. ರಸ್ತೆಗಳ ಇಕ್ಕೆಲಗಳಲ್ಲಿ ನೆರೆದಿದ್ದ ಮಂದಿ ಭಕ್ತಿಪರವಶರಾಗಿ ಗಣಪತಿಯ ಶೋಭಾಯಾತ್ರೆ ವೀಕ್ಷಿಸಿದರು.
ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಕೃಷ್ಣಮಠ ಸಮೀಪ ಸಂಕಷ್ಟಹರ ಗಣಪತಿಗೆ ಮಂಗಳಾರತಿ ಬೆಳಗಿದರು.ಭಕ್ತರೋರ್ವರು ಲಿಚಿ ಹಣ್ಣಿನ ಹಾರದಲ್ಲಿ 60 ಎಂಬುದಾಗಿ ಚಿತ್ರಿಸಿ ವಜ್ರಮಹೋತ್ಸವ ಹಿನ್ನೆಲೆಯಲ್ಲಿ ಗಣಪನಿಗೆ ಸಮರ್ಪಿಸಿದರು.
ಮೆರವಣಿಗೆಯಲ್ಲಿ ಸಮಿತಿ ಗೌರವಾಧ್ಯಕ್ಷ ಶಾಸಕ ಯಶಪಾಲ್ ಸುವರ್ಣ, ಅಧ್ಯಕ್ಷ ಪ.ವಸಂತ ಭಟ್, ಪ್ರಧಾನ ಕಾರ್ಯದರ್ಶಿ ಕೆ,ರಾಘವೇಂದ್ರ ಕಿಣಿ, ವಜ್ರಮಹೋತ್ಸವ ಸಮಿತಿ ಕಾರ್ಯದರ್ಶಿ ಗಿರೀಶ್ ಅಂಚನ್, ಕೋಶಾಧಿಕಾರಿ ವಲ್ಲಭ ಭಟ್ ಮೊದಲಾದವರಿದ್ದರು.
.jpg)
.jpg)
.jpg)