ವಜ್ರಮಹೋತ್ಸವದ ಯಶಸ್ಸು ಉಡುಪಿಯ ಜನತೆಗೆ ಸಮರ್ಪಣೆ

ಲೋಕಬಂಧು ನ್ಯೂಸ್ |  ಉಡುಪಿ
ಕಡಿಯಾಳಿಯ ಉಡುಪಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವಜ್ರಮಹೋತ್ಸವ (60ನೇ ವರ್ಷ)ದ ಸಮಾಪನ ಸಭೆ ಕುಂಜಿಬೆಟ್ಟು ಶ್ರೀ ಶಾರದಾ ಕಲ್ಯಾಣ ಮಂಟಪದಲ್ಲಿ ನಡೆಯಿತು.ಸಭೆಯನ್ನುದ್ದೇಶಿಸಿ ಮಾತನಾಡಿದ ವಜ್ರಮಹೋತ್ಸವ ಸಮಿತಿ ಅಧ್ಯಕ್ಷ ಡಾ.ಕಟ್ಟೆ ರವಿರಾಜ ಆಚಾರ್ಯ, ವಜ್ರಮಹೋತ್ಸವ ಉಡುಪಿ ಮಹಾಜನತೆಯ ಸಹಕಾರದೊಂದಿಗೆ ಯಶಸ್ವಿಯಾಗಿ ನಡೆದಿದ್ದು, ಅದರ ಶ್ರೇಯಸ್ಸು ಉಡುಪಿಯ ಜನತೆಗೆ ಸಲ್ಲುತ್ತದೆ ಎಂದರು.


ವಜ್ರಮಹೋತ್ಸವ ಸಮಿತಿ ಗೌರಾಧ್ಯಕ್ಷ ಮತ್ತು ಉಡುಪಿ ಶಾಸಕ ಯಶಪಾಲ್ ಎ. ಸುವರ್ಣ ಮಾತನಾಡಿ, ಕಾರ್ಯಕರ್ತರ ಹುಮ್ಮಸ್ಸು ಮತ್ತು ಹಿರಿಯರ ಮಾರ್ಗದರ್ಶನದಿಂದ ಕಡಿಯಾಳಿ ಗಣೇಶೋತ್ಸವ ರಾಜ್ಯಕ್ಕೆ ಮಾದರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಮೆರವಣಿಗೆಗೆ ಶೋಭೆ ನೀಡಿದ ಶಾರದೆ ವೇಷಧಾರಿ ಸಾನ್ವಿ ಅವರನ್ನು ಗೌರವಿಸಲಾಯಿತು.


ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ ಮತ್ತು ಅಧ್ಯಕ್ಷ ವಸಂತ್ ಭಟ್ ಉಪಸ್ಥಿತರಿದ್ದರು.


ವಜ್ರಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಗಿರೀಶ್ ಎಂ. ಅಂಚನ್ ಕಾರ್ಯಕ್ರಮದ ಅವಲೋಕನ ಮಾಡಿದರು.


ಸಮಿತಿ ಕಾರ್ಯದರ್ಶಿ ಸತೀಶ್ ಕುಲಾಲ್ ಕಡಿಯಾಳಿ ಸ್ವಾಗತಿಸಿ, ಕೋಶಾಧಿಕಾರಿ ಎಂ. ವಲ್ಲಭ ಭಟ್ ವಂದಿಸಿದರು.