ಕೊಡವೂರು ದೇವಳದಲ್ಲಿ ತಾಂಬೂಲ ಪ್ರಶ್ನಾಚಿಂತನೆ

ಲೋಕಬಂಧು ನ್ಯೂಸ್ | ಮಲ್ಪೆ
ಮಹತೋಬಾರ ಕೊಡವೂರು ಶ್ರೀ ಶಂಕರ ನಾರಾಯಣ ದೇವಸ್ಥಾನದಲ್ಲಿ 2027ರ ಜನವರಿ 20ರಂದು ನಡೆಯಲಿರುವ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಶ್ರೀ ದೇವಳದಲ್ಲಿ ನಡೆಯಲಿರುವ ದುರಸ್ತಿ ಕಾರ್ಯಗಳು, ಪ್ರಾಯಶ್ಚಿತ್ತಾದಿ ಕಾರ್ಯಗಳ ಹಿನ್ನೆಲೆಯಲ್ಲಿ ತಾಂಬೂಲ ಪ್ರಶ್ನಾಚಿಂತನೆ ನೆರವೇರಿಸಲಾಯಿತು.
ವಿದ್ವಾನ್ ಗೋಪಾಲ ಜೋಯಿಸರು, ದೇವಳದ ತಂತ್ರಿಗಳಾದ ಪುತ್ತೂರು ಹಯವದನ ತಂತ್ರಿ ಮತ್ತು ಪುತ್ತೂರು ವಾದಿರಾಜ ತಂತ್ರಿ ನೇತೃತ್ವದಲ್ಲಿ ತಾಂಬೂಲ ಪ್ರಶ್ನೆ ಇರಿಸಲಾಯಿತು.


ಪ್ರಾರಂಭದಿಂದ ಕೊನೆಯ ತನಕವೂ ಉತ್ತಮ ರಾಶಿ ಮೂಲಕ ಆಡಳಿತ ಮಂಡಳಿ ಕಾರ್ಯಗತಗೊಳಿಸುತ್ತಿರುವ ಕಾಮಗಾರಿಗಳಿಗೆ ದೇವರ ಅಪ್ಪಣೆ ಲಭಿಸಿತು.


ಈ ಸಂದರ್ಭದಲ್ಲಿ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ತೊಟ್ಟಂ ಮಧುಸೂದನ ತಂತ್ರಿ, ಪವಿತ್ರಪಾಣಿ ಜನಾರ್ದನ ಕೊಡವೂರು, ವ್ಯವಸ್ಥಾಪನ ಸಮಿತಿ ಸದಸ್ಯರಾದ ಸೀತಾರಾಮ ಆಚಾರ್ಯ, ವಾದಿರಾಜ ಸಾಲ್ಯಾನ್, ಭಾಸ್ಕರ್ ಪಾಲನ್, ಕೆ.ಬಾಬ, ಉಷಾ ಆನಂದ ಸುವರ್ಣ, ಶೀಲಾ ದೇವಾಡಿಗ ಮತ್ತು ಚಂದನ ಭಟ್, ಭಕ್ತವೃಂದ ಕಾರ್ಯದರ್ಶಿ ರಾಮ ಸೇರಿಗಾರ್, ಭಗವತಿ ಮಾರಿಅಮ್ಮ ಕಟ್ಟಡ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಟಿ., ಶಿವಪ್ಪ ಕಾಂಚನ್, ವಾಸುದೇವ ಉಪಾಧ್ಯ ಮೊದಲಾದವರಿದ್ದರು.