ರೆಡ್ ಕ್ರಾಸ್ ಸಂಸ್ಥೆಗೆ ಭೇಟಿ

ಲೋಕಬಂಧು ನ್ಯೂಸ್ ಉಡುಪಿ, ಸೆ.11
ನವದೆಹಲಿಯ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಆಡಳಿತ ಮಂಡಳಿಗೆ ಕರ್ನಾಟಕ ರಾಜ್ಯಪಾಲರಿಂದ ನೇಮಕಗೊಂಡ ಡಾ.ಮುರಳಿ ಮೋಹನ್ ಚಾಂತಾರು ಅವರು ಶುಕ್ರವಾರ ಇಲ್ಲಿನ ರೆಡ್ ಕ್ರಾಸ್ ಜಿಲ್ಲಾ ಶಾಖೆಗೆ ಭೇಟಿ ನೀಡಿದರು.ಜಿಲ್ಲಾ ರೆಡ್ ಕ್ರಾಸ್ ಕಾರ್ಯದರ್ಶಿ ಡಾ.ಗಣನಾಥ ಎಕ್ಕಾರು ಸ್ವಾಗತಿಸಿ, ರೆಡ್ ಕ್ರಾಸ್ ಚಟುವಟಿಕೆಗಳ ಬಗ್ಗೆ ವಿವರಿಸಿದರು.


ಉಡುಪಿ ಜಿಲ್ಲಾ ರೆಡ್ ಕ್ರಾಸ್ ಚಟುವಟಿಕೆ ಹಾಗೂ ರೆಡ್ ಕ್ರಾಸ್ ಪ್ರಾಯೋಜಿತ ಜಿಲ್ಲಾ ವಿಕಲಚೇತನ ಪುನರ್ವಸತಿ ಕೇಂದ್ರದ ಕಾರ್ಯಚಟುವಟಿಕೆಗಳು ರಾಜ್ಯಕ್ಕೇ ಮಾದರಿಯಾಗಿದೆ ಎಂದು ಮುರಳಿ ಮೋಹನ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.


ಈ ಸಂದರ್ಭದಲ್ಲಿ ಅವರನ್ನು ಗೌರವಿಸಲಾಯಿತು.


ಡಿಡಿಆರ್.ಸಿ. ನೋಡಲ್ ಅಧಿಕಾರಿ ಜಯಶ್ರೀ, ಮನಃಶಾಸ್ತ್ರಜ್ಞ ವೈಶಾಖ್ ವಾರಂಬಳ್ಳಿ, ಆಡಿಯೋಲಜಿಸ್ಟ್ ನೆಲಿಶಾ ಮೊದಲಾದವರಿದ್ದರು.