ಜಿಲ್ಲಾಸ್ಪತ್ರೆ ಕಾರ್ಯಾರಂಭ ಆಗ್ರಹಿಸಿ ಕರವೇ ಧರಣಿ 2ನೇ ದಿನಕ್ಕೆ

ಲೋಕಬಂಧು ನ್ಯೂಸ್ | ಉಡುಪಿ
ಕಾಮಗಾರಿ ಪೂರ್ಣಗೊಂಡು ವರ್ಷ ಕಳೆದರೂ, ಅಜ್ಜರಕಾಡಿನಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡ ಉಡುಪಿ ಜಿಲ್ಲಾಸ್ಪತ್ರೆ ಇನ್ನೂ ಕಾರ್ಯಾರಂಭ ಮಾಡದಿರುವುದನ್ನು ಪ್ರತಿಭಟಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಉಡುಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಆಸ್ಪತ್ರೆಯ ಮುಂಭಾಗದಲ್ಲಿ ಅ.1ರಂದು ಗುರುವಾರ ಪ್ರಾರಂಭಗೊಂಡ ಏಳು ದಿನಗಳ ಅಹೋರಾತ್ರಿ ಧರಣಿ ಶುಕ್ರವಾರವೂ ಮುಂದುವರಿದಿದೆ.
ಎರಡನೇ ದಿನದಂದು ಪ್ರತಿಭಟನಾ ಸ್ಥಳದಲ್ಲಿ ಗಾಂಧಿ ಜಯಂತಿ ಆಚರಿಸಲಾಯಿತು.


ದೇಣಿಗೆ ಸಂಗ್ರಹಿಸುತ್ತೇವೆ!
ಆಸ್ಪತ್ರೆಯ ಅನುದಾನ ಬಿಡುಗಡೆಗೆ ಸರಕಾರದ ಬಳಿ ದುಡ್ಡಿನ ಕೊರತೆ ಇದ್ದರೆ ಸಂಘಟನೆಯ ಪದಾಧಿಕಾರಿಗಳು ಹಾಗೂ ಸದಸ್ಯರಿಂದ ದೇಣಿಗೆ ಸಂಗ್ರಹಿಸಿ ಸರ್ಕಾರಕ್ಕೆ ನೀಡುವುದಾಗಿ ಅನ್ಸಾರ್ ಅಹ್ಮದ್ ತಿಳಿಸಿದರು.