ಲೋಕಬಂಧು ನ್ಯೂಸ್ | ಉಡುಪಿ
ಅಮೆರಿಕಾದ ಸಂಘಟನೆಯೊಂದರಿಂದ ವಿಶ್ವಗುರು ಪ್ರಶಸ್ತಿ ಪಡೆದಿರುವ ಭಾರತೀಯ ಮೂಲದ ಖ್ಯಾತ ಉದ್ಯಮಿ, ಹಿಂದ್ 4 ಹಿಂದೂಸ್ ಖ್ಯಾತಿಯ ರಾಜರ್ಷಿ ಡಾ.ಬಿ.ಕೆ.ಮೋದಿ ಅವರು ಅಕ್ಟೋಬರ್ 3ರಂದು ಉಡುಪಿಗೆ ಅಗಮಿಸುವರು.
ಉಡುಪಿ ತಾಲೂಕು ಬ್ರಾಹ್ಮಣ ಸಭಾ ಹಾಗೂ ಜಿಲ್ಲೆಯ ವಿಪ್ರ ಸಂಘಟನೆಗಳ ಸಹಭಾಗಿತ್ವದಲ್ಲಿ ಕಾಪು ದಂಡತೀರ್ಥ ಪ್ರತಿಷ್ಠಾನ ವತಿಯಿಂದ ಅವರನ್ನು ಸನ್ಮಾನಿಸಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ.ಸೀತಾರಾಮ್ ಭಟ್ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಕಿನ್ನಿಮೂಲ್ಕಿ ಶ್ರೀದೇವಿ ಸಭಾಭವನದಲ್ಲಿ ಬೆಳಿಗ್ಗೆ 9.30ರಿಂದ ಕಾರ್ಯಕ್ರಮ ನಡೆಯಲಿದೆ. ಜಿಲ್ಲೆಯ ವಿವಿಧ ಸಂಘಟನೆಗಳ ಜೊತೆ ಡಾ.ಮೋದಿ ಸಂವಾದ ನಡೆಸಲಿದ್ದಾರೆ ಎಂದವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಉಡುಪಿ ತಾಲೂಕು ಬ್ರಾಹ್ಮಣ ಸಭಾ ಅಧ್ಯಕ್ಷ ಶ್ರೀಕಾಂತ ಉಪಾಧ್ಯಾಯ, ಪ್ರದೀಪ್ ನಂಬಿಯಾರ್, ಕಮಲಾಪತಿ ಕಶ್ಯಪ್, ಶ್ರೀಧರ ಭಟ್ ಉಚ್ಚಿಲ ಹಾಗೂ ರಮೇಶ್ ರಾವ್ ಬೀಡು ಉಪಸ್ಥಿತರಿದ್ದರು.
.jpg)
.jpg)