ಎಂಆರ್‌ಪಿಎಲ್ 3ನೇ ಘಟಕದಲ್ಲಿ ಭಾರಿ ಸ್ಪೋಟ

ಲೋಕಬಂಧು ನ್ಯೂಸ್ | ಮಂಗಳೂರು
ಮಂಗಳೂರಿನ ಎಂಆರ್‌ಪಿಎಲ್ 3ನೇ ಹಂತದ ತೈಲ ಸಂಸ್ಕರಣಾ ಘಟಕದಲ್ಲಿ ದೊಡ್ಡ ಮಟ್ಟದ ಸ್ಫೋಟ ಸಂಭವಿಸಿರುವುದಾಗಿ ವರದಿಯಾಗಿದೆ.
ಸ್ಫೋಟದ ಪರಿಣಾಮ ಎಂಆರ್‌ಪಿಎಲ್ ಘಟಕದಿಂದ ದಟ್ಟ ಹೊಗೆ ಬೆಂಕಿ ಕಾಣಿಸಿದ್ದು, ಜನರಲ್ಲಿ ಆತಂಕ ಮೂಡಿಸಿದೆ.


ಸ್ಥಳೀಯರ ಪ್ರಕಾರ, ಎಂಆರ್‌ಪಿಎಲ್ 3ನೇ ಹಂತದ ತೈಲ ಶುದ್ದೀಕರಣ ಘಟಕದಿಂದ ಸ್ಫೋಟದ ಶಬ್ದ ಕೇಳಿಸಿದ್ದು ಜೋಕಟ್ಟೆ, ಬಜಪೆ, ಏರ್‌ಪೋರ್ಟ್ ಸುತ್ತಮುತ್ತಲಿನ ವರೆಗೆ ಸ್ಫೋಟದ ತೀವ್ರತೆಯ ಅನುಭವವಾಗಿದೆ. ಬಾಯ್ಲರ್ ಸ್ಫೋಟವಾಗಿದೆ ಎನ್ನಲಾಗಿದೆ.