ತಿರುಪತಿ ವಿಮಾನ ನಿಲ್ದಾಣದಲ್ಲಿ 'ಯಾತ್ರಿ ಸೇವಾ' ಅಭಿಯಾನ

ಲೋಕಬಂಧು ನ್ಯೂಸ್ | ತಿರುಪತಿ
ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಜನಸೇವೆಯ ನೆನಪಿಗಾಗಿ ನಡೆಯುತ್ತಿರುವ 'ಸೇವಾ ಸಂಕಲ್ಪ ಅಭಿಯಾನ' ಅಂಗವಾಗಿ ತಿರುಪತಿ ವಿಮಾನ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಯಾತ್ರಿ ಸೇವಾ ಅಭಿಯಾನವನ್ನು ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಮಾಜಿ ಅಧ್ಯಕ್ಷೆ ವೀಣಾ ಎಸ್.ಶೆಟ್ಟಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಕರ್ನಾಟಕದಿಂದ ಬಂದ ತನಗೆ ಆಂಧ್ರಪ್ರದೇಶದಲ್ಲಿ, ಅದರಲ್ಲೂ ಶ್ರೀನಿವಾಸನ ಸನ್ನಿಧಿಯಲ್ಲಿ ಪ್ರಧಾನಿ ಕಾರ್ಯಕ್ರಮ ಉದ್ಘಾಟಿಸುವ ಸೌಭಾಗ್ಯ ಲಭಿಸಿರುವುದು ಭಾಗ್ಯ ವಿಶೇಷ. ನಾವು ಪಕ್ಷದಲ್ಲಿ ಮಾಡಿದ ಸೇವೆಯನ್ನು ಭಗವಂತ ನೋಡುತ್ತಾನೆ ಎಂಬುದಕ್ಕೆ ಇದೇ ಸಾಕ್ಷಿ ಎಂದರು.


ಅ.17ರ ವರೆಗೆ ನಡೆಯುವ ಅಭಿಯಾನ 'ಜನಸೇವೆಯಿಂದ ರಾಷ್ಟ್ರಸೇವೆಯೆಡೆಗೆ' ಎಂಬ ಸಂಕಲ್ಪದೊಂದಿಗೆ ನಡೆಯುತ್ತಿದೆ.