ಕಾರ್ಮಿಕನ ಕೊಲೆ ಆರೋಪಿ ಸೆರೆ

ಲೋಕಬಂಧು ನ್ಯೂಸ್ ಮಲ್ಪೆ
ಇಲ್ಲಿನ ಬಾಬುತೋಟ ಧಕ್ಕೆ ಬಳಿ ಗುಜರಿ ಹೆಕ್ಕುವ ಕಾರ್ಮಿಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಮೂಲದ ಆರೋಪಿಯನ್ನು ಮಲ್ಪೆ ಪೊಲೀಸರು ಬಂಧಿಸಿದ್ದು,‌ ಬಂಧಿತನನ್ನು ಆರೋಗ್ಯ ದಾಸ್ ಅಲಿಯಾಸ್‌ ಕಾಮಿ (55) ಎಂದು ಗುರುತಿಸಲಾಗಿದೆ.ಕಳೆದ ಸುಮಾರು ಮೂರು ವರ್ಷದಿಂದ ಮಲ್ಪೆ ಬಂದರು ಪ್ರದೇಶದಲ್ಲಿ ಗುಜರಿ ವಸ್ತುಗಳನ್ನು ಸಂಗ್ರಹಿಸಿಕೊಂಡು ಜೀವನ ನಡೆಸುತ್ತಿದ್ದ ಪರಮೇಶಿ ಎಂಬಾತನನ್ನು ಸೆ.28ರಂದು ಕತ್ತು ಸೀಳಿ ಕೊಲೆ ಮಾಡಲಾಗಿತ್ತು.


ಪ್ರಕರಣದ ತನಿಖೆ‌ ನಡೆಸಿದ ಪೊಲೀಸರು ಆರೋಪಿಯನ್ನು ಹುಬ್ಬಳ್ಳಿ ಹೊರವಲಯದಲ್ಲಿ ಬಂಧಿಸಿದ್ದಾರೆ.


ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಕೆ.ಯು. ಹಾಗೂ ಮಲ್ಪೆ ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್ ಮಾರ್ಗದರ್ಶನದಲ್ಲಿ ಮಲ್ಪೆ ಠಾಣೆ ಪೊಲೀಸ್‌ ಉಪನಿರೀಕ್ಷಕ ಅನಿಲ್ ಕುಮಾ‌ರ್ ಡಿ. ನೇತೃತ್ವದಲ್ಲಿ ಸಿಬ್ಬಂದಿಗಳಾದ ವಿಶ್ವನಾಥ್, ಆದರ್ಶ ಹಾಗೂ ಕುಬೇರ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.