ಲೋಕಬಂಧು ನ್ಯೂಸ್ ನವದೆಹಲಿ
ಗ್ರಾಹಕರಿಗೆ ಸುಗಮವಾಗಿ ಸಕ್ಕರೆ ಲಭಿಸುವಂತೆ ಮಾಡಲು ಮತ್ತು ಮಾರುಕಟ್ಟೆಯಲ್ಲಿ ಬೆಲೆ ಸ್ಥಿರತೆ ಕಾಯ್ದುಕೊಳ್ಳುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ.ಸಕ್ಕರೆ ದಾಸ್ತಾನು ಹಾಗೂ ಸಂಗ್ರಹಣೆ ಮಾನದಂಡಗಳನ್ನು ಪರಿಷ್ಕರಣೆ ಮಾಡಲಾಗಿದ್ದು ವ್ಯಾಪಾರಿಗಳು ಗರಿಷ್ಠ 15 ದಿನಗಳ ಅವಧಿಗೆ ಮಾತ್ರ 1,000 ಕ್ವಿಂಟಾಲ್ ದಾಸ್ತಾನು ಇಟ್ಟುಕೊಳ್ಳಲು ಮಿತಿ ವಿಧಿಸಲಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಸಚಿವ ಪ್ರಹ್ಲಾದ್ ಜೋಶಿ ಸೂಚನೆ ನೀಡಿದ್ದಾರೆ.