ಲೋಕಬಂಧು ನ್ಯೂಸ್ ಬೆಂಗಳೂರು
ಭಾರತೀಯ ಚಿತ್ರರಂಗದ ಮಾಣಿಕ್ಯ ಸಿಂಗೀತಂ ಶ್ರೀನಿವಾಸ್ ರಾವ್ ನಿಧನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.ಸಿಂಗೀತಂ ಅವರ ಅಗಲಿಕೆಯಿಂದ ದುಃಖಿತನಾಗಿದ್ದು, ಅವರ ನಿಧನದಿಂದ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.
ಅತ್ಯುತ್ತಮ ಚಿತ್ರಗಳ ಮೂಲಕ ಕನ್ನಡ ಚಲನಚಿತ್ರ ರಂಗಕ್ಕೆ
ಹೊಸ ಆಯಾಮ ನೀಡಿದ ಸಿಂಗೀತಂ ಶ್ರೀನಿವಾಸ್ ಅವರು, ಡಾ.ರಾಜಕುಮಾರ್ ಅಭಿನಯದ 'ಹಾಲುಜೇನು', 'ಚಲಿಸುವ ಮೋಡಗಳು', 'ಶ್ರಾವಣ ಬಂತು' ಮುಂತಾದ ಸದಭಿರುಚಿಯ ಹಿಟ್ ಚಿತ್ರಗಳನ್ನು ನಿರ್ದೇಶಿಸಿದ್ದರು ಎಂದು ಸ್ಮರಿಸಿದ್ದಾರೆ.
ಸಿಂಗೀತಂ ಅವರ 'ಪುಷ್ಪಕ ವಿಮಾನ' ಮೂಕಿಚಿತ್ರ ಭಾರತೀಯ ಚಿತ್ರರಂಗದ ಮೈಲಿಗಲ್ಲು. ಅವರ ಅನನ್ಯ ಪ್ರತಿಭೆಗೆ ಸಾಕ್ಷಿ ಎಂದು ಸಿಎಂ ಹೇಳಿದ್ದಾರೆ.