ಸಿಎಂ ಡಿಕೆಶಿ ನೇತೃತ್ವದ ಧರಣಿಗೆ ಮಣಿದ ಚುನಾವಣಾ ಆಯೋಗ

ಲೋಕಬಂಧು ನ್ಯೂಸ್ ಬೆಂಗಳೂರು
ಮತದಾರರ ಅರ್ಜಿ ನಮೂನೆ-7 ಸಂಬಂಧ ಸಿಎಂ ಡಿ.ಕೆ. ಶಿವಕುಮಾ‌ರ್ ನೇತೃತ್ವದಲ್ಲಿ ನಡೆದ ಹೋರಾಟಕ್ಕೆ ಚುನಾವಣಾ ಆಯೋಗ ಮಣಿದಿದ್ದು, ತನಿಖೆಗೆ ಆದೇಶಿಸಿದೆ.ಆಯೋಗ ರಾಜ್ಯದಲ್ಲಿ ಫಾರ್ಮ್ 6, ಫಾರ್ಮ್ 6A, ಫಾರ್ಮ್ 7 ಬಳಸಿ ಸುಳ್ಳು ಅರ್ಜಿ ಸಲ್ಲಿಸಿರುವವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ರಾಜ್ಯದ ಎಲ್ಲಾ ಚುನಾವಣಾ ನೋಂದಣಿ ಅಧಿಕಾರಿಗಳಿಗೆ ಸೂಚನೆ ನೀಡಿದೆ.


ಮರಣ ಮತ್ತು 2 ಬಾರಿ ನೋಂದಣಿ ಪ್ರಕರಣ ಹೊರತುಪಡಿಸಿ ಬೇರೆ ಯಾವುದೇ ಫಾರಂನ್ನು ಅನುಮೋದನೆ ಮಾಡುವಂತಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತರು ಎಲ್ಲ ತಹಸೀಲ್ದಾರ್‌ಗೆ ನಿರ್ದೇಶನ ನೀಡಿದ್ದಾರೆ