ಹಿರೇಬೆಟ್ಟು ಮಹಾಲಿಂಗೇಶ್ವರ ದೇವಳ ಸುತ್ತುಪೌಳಿ ಕಾಮಗಾರಿ ಶಿಲಾ ಮುಹೂರ್ತ

ಲೋಕಬಂಧು ನ್ಯೂಸ್ ಹಿರಿಯಡಕ
ಇಲ್ಲಿಗೆ ಸಮೀಪದ ಹಿರೇಬೆಟ್ಟು ಭಟ್ರಕೋಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ಕೈಗೆತ್ತಿಕೊಳ್ಳಲಾಗಿರುವ ಸುತ್ತುಪೌಳಿ ಕಾಮಗಾರಿಯ ಪ್ರಾರಂಭ ಹಾಗೂ ಶಿಲಾ ಮುಹೂರ್ತ ಕಾರ್ಯಕ್ರಮ ವಿವಿಧ ಧಾರ್ಮಿಕ ವಿಧಿ- ವಿಧಾನಗಳೊಂದಿಗೆ ನೆರವೇರಿತು.ಕ್ಷೇತ್ರದ ತಂತ್ರಿ ಡಾ.ಸತ್ಯಕೃಷ್ಣ ಭಟ್ ಮಂಗಳೂರು ಅವರ ನೇತೃತ್ವದಲ್ಲಿ ದೇವತಾ ಪ್ರಾರ್ಥನೆ, ಪುಣ್ಯಾಹವಾಚನ, ದ್ವಾದಶ ನಾರಿಕೇಳ ಮಹಾಗಣಪತಿ ಹೋಮ ಸೇರಿದಂತೆ ವಿವಿಧ ವೈದಿಕ ವಿಧಿ ವಿಧಾನಗಳು ನೆರವೇರಿ, ಧನುರ್ಲಗ್ನದ ಸುಮುಹೂರ್ತದಲ್ಲಿ ಸುತ್ತುಪೌಳಿ ಕಾಮಗಾರಿಗೆ ಶಿಲಾ ಮುಹೂರ್ತ ನೆರವೇರಿಸಲಾಯಿತು.


ಕಾರ್ಯಕ್ರಮದಂಗವಾಗಿ ಭ್ರಮರಾಂಬಿಕಾ ಮಹಿಳಾ ಭಜನಾ ಮಂಡಳಿ ಕಬ್ಯಾಡಿ ಹಾಗೂ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನ ಪರ್ಕಳ ಅವರಿಂದ ಭಜನಾ ಸೇವೆ ನಡೆಯಿತು.


ಇದೇ ಸಂದರ್ಭದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಯೋಜಿತ ವಿನ್ಯಾಸ ಹಾಗೂ ನಿರ್ಮಾಣದ ಸ್ವರೂಪವನ್ನು ಪರಿಚಯಿಸುವ ವಾಕ್ ಥ್ರೂ ವೀಡಿಯೊವನ್ನು ಡಾ.ಸತ್ಯಕೃಷ್ಣ ಭಟ್ ಅನಾವರಣಗೊಳಿಸಿದರು.


ಬಳಿಕ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಿತು.


ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿಧಿ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ವಿ. ನಾಯಕ್, ಖಜಾಂಚಿ ಚಂದ್ರಶೇಖರ ನಾಯಕ್ ಹಾಗೂ ಸಮಿತಿಯ ಪ್ರಮುಖರಾದ ಜಯಪ್ರಕಾಶ್ ನಾಯಕ್, ಗುರುದಾಸ್ ಭಂಡಾರಿ, ಸೀತಾರಾಮ ಭಟ್, ಉಮೇಶ್ ಭಟ್, ದಿನೇಶ್ ಪ್ರಭು, ನಾರಾಯಣ ಪೂಜಾರಿ, ಉಮೇಶ್ ನಾಯಕ್, ವಸಂತರಾಯ ಪ್ರಭು, ಶೈಲೇಶ್, ಅಶೋಕ್ ನಾಯಕ್, ರಾಜೇಶ್ ಭಟ್, ಕಾಳಿದಾಸ ಭಂಡಾರಿ, ಶಂಕರ್ ನಾಯಕ್, ಶ್ರೀಧರ್ ನಾಯ್ಕ್, ಸುರೇಶ್ ನಾಯ್ಕ್, ಲಕ್ಷ್ಮೀಶ ಭಟ್, ಸುಧಾಕರ್ ಆಚಾರ್ಯ, ಶ್ಯಾಮ್ ನಾಯ್ಕ್, ಗಣಪತಿ ಕಾಮತ್, ಕೃಷ್ಣ ನಾಯ್ಕ್, ಶ್ರೀಪತಿ ಭಟ್, ಕೇಶವ ಭಂಡಾರಿ, ಹರೀಶ್ ಶೆಟ್ಟಿ, ಶರತ್ ಹೆಗ್ಡೆ, ಮುರಳೀಧರ್ ಲಾಗ್ವಾಂಕರ್, ಸುಧಾಕರ್ ಲಾಗ್ವಾಂಕರ್, ಅಶೋಕ್ ಲಾಗ್ವಾಂಕರ್, ಮಣಿಕಂಠ ಭಟ್, ಶ್ರೀಧರ ಭಟ್, ಬಾಲಕೃಷ್ಣ ಭಟ್, ವಿಕ್ರಮ್ ಭಟ್, ಸುಧೀರ್ ಪೂಜಾರಿ ಹಾಗೂ ಮಹೇಶ್ ಪುತ್ರನ್ ಮೊದಲಾದವರಿದ್ದರು.