ಲೋಕಬಂಧು ನ್ಯೂಸ್ | ಮಂಗಳೂರು
ಕಲ್ಕೂರ ಪ್ರತಿಷ್ಠಾನ ಆಶ್ರಯದಲ್ಲಿ ಅಕ್ಟೋಬರ್ 10ರಂದು ನಡೆಯುವ ಕೋಟ ಡಾ.ಶಿವರಾಮ ಕಾರಂತ ಜನ್ಮದಿನೋತ್ಸವ ಅಂಗವಾಗಿ ಕಾರಂತರ ಬಗ್ಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ.
ಕಾಲೇಜು ಹಾಗೂ ಮುಕ್ತ ಎಂಬೆರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು 3 ಪುಟಕ್ಕೆ ಮೀರದಂತೆ ಪ್ರಬಂಧವನ್ನು ಅ.7ರೊಳಗಾಗಿ ಸ್ವ ವಿಳಾಸ ಮತ್ತು ಸಂಪರ್ಕ ದೂರವಾಣಿ ಸಂಖ್ಯೆಯೊಂದಿಗೆ ಪ್ರೊ. ಜಿ.ಕೆ ಭಟ್ ಸೇರಾಜೆ, ಕಲ್ಕೂರ ಪ್ರತಿಷ್ಠಾನ, ಶ್ರೀಕೃಷ್ಣ ಸಂಕೀರ್ಣ, ಮಹಾತ್ಮಗಾಂಧಿ ರಸ್ತೆ, ಕೊಡಿಯಾಲ್‌ಬೈಲ್, ಮಂಗಳೂರು ವಿಳಾಸಕ್ಕೆ ತಲುಪುವಂತೆ ಕಳಿಸಿಕೊಡುವಂತೆ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಬಂಧದ ವಿಷಯ
ಕಾಲೇಜು ವಿಭಾಗ: ಕಾರಂತ- ಪರಿಸರ/ ಯಕ್ಷಗಾನ ಮಕ್ಕಳ ಸಾಹಿತ್ಯ ಅವಲೋಕನ, ಅನುಸಂಧಾನ
ಮುಕ್ತ ವಿಭಾಗ: ಕಾರಂತರ ಸಾಹಿತ್ಯ (ಕಾದಂಬರಿಗಳು/ ನಾಟಕ) ಅವಲೋಕನ, ಅನುಸಂಧಾನ
