ಉಚಿತ ಕನ್ನಡಕ ವಿತರಣೆ

ಲೋಕಬಂಧು ನ್ಯೂಸ್ | ಉಡುಪಿ
ಪಡುಬೈಲೂರು ಶ್ರೀ ಇಷ್ಟ ಮಹಾಲಿಂಗೇಶ್ವರ ಹುಲಿವೇಷ ತಂಡ ಟ್ರಸ್ಟ್‌ನ 11ನೇ ವರ್ಷದ ಸೇವಾ ಕಾರ್ಯಕ್ರಮ ಅಂಗವಾಗಿ ಉಡುಪಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ಈಚೆಗೆ ಆಯೋಜಿಸಿದ್ದ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಚಿತ ಕನ್ನಡಕ ವಿತರಿಸಲಾಯಿತು.
ಪ್ರಸಾದ್ ನೇತ್ರಾಲಯ ಸಮೂಹ ಕಣ್ಣಿನ ಆಸ್ಪತ್ರೆಗಳ ಸ್ಥಾಪಕ ಹಾಗೂ ಕರ್ನಾಟಕ ಸರಕಾರದ ವಿಷನ್ ಕಮಿಟಿ ಅಧ್ಯಕ್ಷ ಡಾ.ಕೃಷ್ಣಪ್ರಸಾದ್ ಕೂಡ್ಲು ಕನ್ನಡಕ ವಿತರಿಸಿದರು.


ಬಳಿಕ‌ ಮಾತನಾಡಿದ ಡಾ.ಕೃಷ್ಣ ಪ್ರಸಾದ್ ಕೂಡ್ಲು, ಪ್ರಸಾದ್ ನೇತ್ರಾಲಯ ಕಳೆದ 25 ವರ್ಷಗಳಿಂದ ಶಿಬಿರಗಳ ಮೂಲಕ ಜನರಿಗೆ ಉಚಿತ ಸೇವೆ ನೀಡುತ್ತಿದ್ದು, ಯಾವುದೇ ಅನುದಾನ ಇಲ್ಲದೇ ಸ್ವಂತ ಸಂಪನ್ಮೂಲಗಳಿಂದ ಶಿಬಿರಗಳ ಮೂಲಕ ಉಚಿತ ನೇತ್ರ ಸೇವೆ ನೀಡುತ್ತಿದೆ ಎಂದರು.


ಅಭ್ಯಾಗತರಾಗಿದ್ದ ಹಿರಿಯ ವಕೀಲ ಮತ್ತು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಮಟ್ಟಾರು ರತ್ನಾಕರ ಹೆಗ್ಡೆ ಶುಭ ಹಾರೈಸಿದರು.


ಪ್ರಸಾದ್ ನೇತ್ರಾಲಯದ ಮುಖ್ಯ ಆಡಳಿತಾಧಿಕಾರಿ ಮಧ್ವವಲ್ಲಭ ಆಚಾರ್ಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಇಷ್ಟ ಮಹಾಲಿಂಗೇಶ್ವರ ಹುಲಿವೇಷ ತಂಡದ ವ್ಯವಸ್ಥಾಪಕ ನಾಗರಾಜ ಐತಾಳ್ ವಂದಿಸಿದರು. ತಂಡದ ನಾಯಕ ಗೌತಮ್ ಕೆ.ಬಿ, ಸದಸ್ಯರಾದ ವಿಜಿತ್, ಅಮೋಘ ಆಚಾರ್ಯ ಸಹಕರಿಸಿದರು.


ಈ ಸಂದರ್ಭದಲ್ಲಿ 90 ಜನರಿಗೆ ಉಚಿತ ಕನ್ನಡಕ ವಿತರಿಸಲಾಯಿತು.