ಲೋಕಬಂಧು ನ್ಯೂಸ್ | ಉಡುಪಿ, ಮಾ. 11
ಶಂಕರಪುರ ದ್ವಾರಕಾಮಾಯಿ ಶ್ರೀ ಸಾಯಿ ಸಾಂತ್ವನ ಮಠದಲ್ಲಿ ಏಪ್ರಿಲ್ 2ರಂದು ಶ್ರೀ ಮುಖ್ಯಪ್ರಾಣನ 19 ಅಡಿ ಎತ್ತರದ ಏಕಶಿಲಾ ಮೂರ್ತಿ ಪ್ರತಿಷ್ಠಾಪನೆ ಹಾಗೂ ಭಗವಾನ್ ಶ್ರೀ ನಿತ್ಯಾನಂದ ಸ್ವಾಮಿ ಪ್ರತಿಷ್ಠಾ
ಬುಧವಾರ ಸುದ್ದಿಗೋಷ್ಟಿಯಲ್ಲಿ ಕಾರ್ಯಕ್ರಮದ ಮಾಹಿತಿ ನೀಡಿದ ಅವರು, ಮಾ.31ರಿಂದ ತತ್ಸಂಬಂಧದ ಕಾರ್ಯಕ್ರಮಗಳು ನಡೆಯಲಿದೆ. ಮಾ.26ರಂದು ಶ್ರೀರಾಮನವಮಿ ದಿನದಂದು ಹನುಮನ ಜನ್ಮಭೂಮಿ ಅಂಜನಾದ್ರಿಯಿಂದ ಹೊರಟ ಹನುಮ ಜ್ಯೋತಿ ಹಾಗೂ ಧ್ವಜ ಮಾ.29ರಂದು ಉಡುಪಿ ತಲುಪಲಿದೆ.
ಅಂದು ಅಪರಾಹ್ನ 3.30ರಿಂದ ಹನುಮ ಜ್ಯೋತಿ ಮತ್ತು ಧ್ವಜ ಹಾಗೂ ಶ್ರೀಕ್ಷೇತ್ರದಲ್ಲಿ ಪ್ರತಿಷ್ಠಾಪಿಸಲಾಗುವ 200 ಕೆ.ಜಿ. ತೂಕದ ಭಗವಾನ್ ಶ್ರೀ ನಿತ್ಯಾನಂದ ಸ್ವಾಮಿಯ ಪಂಚಲೋಹದ ಮೂರ್ತಿಯನ್ನು ಭವ್ಯ ಮೆರವಣಿಗೆ ಮೂಲಕ ಶಂಕರಪುರಕ್ಕೆ ಕೊಂಡೊಯ್ಯಲಾಗುವುದು ಎಂದರು.
ಶ್ರೀಕ್ಷೇತ್ರ ಶಂಕರಪುರ ದ್ವಾರಕಾಮಾಯಿ ಮಠ ಹಾಗೂ ಶ್ರೀ ಸಾಯಿ ಸಾಂತ್ವನ ಮಂದಿರ ಟ್ರಸ್ಟ್ ಆಶ್ರಯದಲ್ಲಿ ಕ್ಷೇತ್ರದ ತಂತ್ರಿಗಳಾದ ದೇವದಾಸ ತಂತ್ರಿ ಮುಂಬೈ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ವಿವಿಧ ಗಣ್ಯಪ್ರಮುಖರು ಭಾಗವಹಿಸುವರು ಎಂದು ಶ್ರೀ ಸಾಯಿ ಈಶ್ವರ್ ಗುರೂಜಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ವೀಣಾ ಎಸ್. ಶೆಟ್ಟಿ, ಗೀತಾಂಜಲಿ ಎಂ. ಸುವರ್ಣ, ಅಭಿರಾಜ್ ಎಂ. ಸುವರ್ಣ, ವಿಜಯ ಕೊಡವೂರು ಇದ್ದರು.
