ಜಿಲ್ಲಾ ರೆಡ್ ಕ್ರಾಸ್ ಗೌರವಕ್ಕೆ ಐವರು ಸಾಧಕಿಯರು ಆಯ್ಕೆ

ಲೋಕಬಂಧು ನ್ಯೂಸ್ | ಉಡುಪಿ, ಮಾ.13
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಡಾ.ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಸಹಯೋಗದಲ್ಲಿ ಉಡುಪಿ ಜಿಲ್ಲಾ ಲೇಖಕಿಯರು ವಾಚಕಿಯರ ಸಂಘದ ಆಶ್ರಯದಲ್ಲಿ ಮಾ. 14ರಂದು ರೆಡ್ ಕ್ರಾಸ್ ಭವನದಲ್ಲಿ ನಡೆಯುವ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಮಹಿಳಾ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ರೆಡ್ ಕ್ರಾಸ್ ಘಟಕ ಉಡುಪಿ ಜಿಲ್ಲೆಯ ಐದು ಮಂದಿ ಸಾಧಕಿಯರನ್ನು ಗೌರವಿಸಲಿದೆ.
ಸಾರ್ವಜನಿಕ ಆಡಳಿತ ಸೇವೆಗಾಗಿ ಶ್ಯಾಮಲಾ ಸಿ.ಕೆ., ಹಿರಿಯ ಲೇಖಕಿ ಮತ್ತು ಭಾಷಾಂತರಗಾರ್ತಿ ಡಾ.ಪಾರ್ವತಿ ಜಿ. ಐತಾಳ್, ಕಲೆ ಮತ್ತು ಸಮಾಜಸೇವೆಗಾಗಿ ಕುಸುಮ ಕಾಮತ್ ಕರ್ವಾಲು, ಶೈಕ್ಷಣಿಕ ಸೇವೆಗಾಗಿ ಪ್ರೊ. ಸುಜಯ ಕೆ.ಎಸ್, ಹಿಂದಿ ಸಾಹಿತ್ಯ, ಎನ್.ಎಸ್.ಎಸ್./ ಎನ್.ಸಿ.ಸಿ ಮತ್ತು ರೆಡ್ ಕ್ರಾಸ್ ಸೇವೆಗಾಗಿ ಕ್ಯಾ. ಡಾ.ಸುಕನ್ಯ ಮೇರಿ ಮಾರ್ಟಿಸ್ ಅವರನ್ನು ಚಲನಚಿತ್ರ ಮತ್ತು ರಂಗನಟಿ ಗೀತಾ ಸುರತ್ಕಲ್ ಸನ್ಮಾನಿಸಿ, ಗೌರವಿಸುವರು ಎಂದು ರೆಡ್ ಕ್ರಾಸ್ ಪ್ರಕಟನೆ ತಿಳಿಸಿದೆ.