23 ವರ್ಷದಿಂದ ತಲೆಮರೆಸಿಕೊಂಡಿದ್ದಾತನ ಸೆರೆ

ಲೋಕಬಂಧು ನ್ಯೂಸ್ | ಉಡುಪಿ, ಏ.15
ಕಳೆದ 23 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರೆಂಟ್‌ ಆರೋಪಿ ಎಂ. ಬಾಬು (52) ಎಂಬಾತನನ್ನು ಬೆಂಗಳೂರಿನ ಶಿವನಗರದಲ್ಲಿ ಮಲ್ಪೆ ಪೊಲೀಸರು ದಸ್ತಗಿರಿ ಮಾಡಿದ್ದಾರೆ.
ಆತನ ಪತ್ತೆ ಬಗ್ಗೆ  ಪೊಲೀಸ್ ಉಪಾಧೀಕ್ಷಕರು ಉಡುಪಿ ಉಪವಿಭಾಗ ಮತ್ತು ಪೊಲೀಸ್ ವೃತ್ತ ನಿರೀಕ್ಷಕರು ಮಲ್ಪೆ ಮಾರ್ಗದರ್ಶನದಲ್ಲಿ, ಮಲ್ಪೆ ಪೊಲೀಸ್‌ ಠಾಣಾ ಉಪನಿರೀಕ್ಷಕ ಅನಿಲ್ ಕುಮಾರ್‌ ಡಿ. ನೇತೃತ್ವದಲ್ಲಿ ಕಳೆದ 5 ತಿಂಗಳಿನಿಂದ ಪ್ರಯತ್ನಿಸಿ ಮಾಹಿತಿ ಕಲೆ ಹಾಕಿ, ಖಚಿತ ಮಾಹಿತಿ ಮೇರೆಗೆ ಠಾಣಾ ಸಿಬ್ಬಂದಿಗಳಾದ ಎಚ್.ಸಿ.ಗಳಾದ ಸುರೇಶ್ ಕುಮಾರ್ ಮತ್ತು  ವಿಶ್ವನಾಥ್ ಎಚ್. ಏ.12 ದಿನಾಂಕ 12ರಂದು ಬೆಂಗಳೂರಿಗೆ ತೆರಳಿ ಏ. 14ರಂದು ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ  ಪತ್ತೆ ಹಚ್ಚಿ ದಸ್ತಗಿರಿ ಮಾಡಿ ಏ.15ರಂದು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಏ. 28ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.