ಏ.18: ವಿಶ್ವಾರ್ಪಣಮ್- ಚಿಂತನ ಮಂಥನ ಕಾರ್ಯಕ್ರಮ

ಲೋಕಬಂಧು ನ್ಯೂಸ್ | ಉಡುಪಿ, ಏ.13
ಅದಮಾರು ಮಠ ಆಶ್ರಯದ ಶ್ರೀಕೃಷ್ಣ ಸೇವಾ ಬಳಗ ವತಿಯಿಂದ ಏ.18ರಂದು ನಗರದ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ವಿಶ್ವಾರ್ಪಣಮ್ ಕಾರ್ಯಕ್ರಮ ನಡೆಯಲಿದ್ದು, ಚಿಂತನ ಮಂಥನ ಮತ್ತು ಸಂವಾದ ಕಾರ್ಯಕ್ರಮ ನಡೆಯಲಿದೆ.
ಅಂದು ಅಪರಾಹ್ನ 4 ಗಂಟೆಯಿಂದ ನಡೆಯುವ ಕಾರ್ಯಕ್ರಮದಲ್ಲಿ ತಿಳಿದು ಆಚರಿಸು- ಆಚರಿಸಿ ತಿಳಿ ಚಿಂತನ ಮತ್ತು ಸಂವಾದ ನಡೆಯಲಿದೆ.
ಖ್ಯಾತ ಗಾಯಕರಾದ ವಿದ್ಯಾಭೂಷಣ ಅವರ ಹಾಡುಗಾರಿಕೆ ಇದ್ದು, ಅವರ ಪ್ರತೀ ಹಾಡುಗಳಿಗೆ  ವಿದ್ವಾಂಸರಾದ ವಿಜಯಸಿಂಹ ಆಚಾರ್ಯ ಬೆಂಗಳೂರು, ಕೃಷ್ಣರಾಜ ಕುತ್ಪಾಡಿ, ಪ್ರಕಾಶ ಮಲ್ಪೆ ಮತ್ತು ಶ್ರೀಕಾಂತ ಶೆಟ್ಟಿ ಕಾರ್ಕಳ ಅವರು ಹಾಡುಗಳ ಅರ್ಥ ಸಹಿತ ವಿಶ್ಲೇಷಣೆ ನಡೆಸುವರು. ಆ ಮೂಲಕ ಯಾವುದೇ ಕಾರ್ಯವನ್ನು ತಿಳಿದು ಆಚರಿಸಬೇಕು, ಆಚರಿಸಿ ತಿಳಿಯಬೇಕು ಎಂಬುದು ಈ ವಿಶಿಷ್ಟ ಕಾರ್ಯಕ್ರಮದ ವಿಶೇಷತೆಯಾಗಿದೆ.


ಬಳಿಕ  ಬನ್ನಂಜೆ ಸಂಜೀವ ಸುವರ್ಣ ಸಾರಥ್ಯದಲ್ಲಿ ಶ್ರೀ ಪೂರ್ಣಪ್ರಜ್ಞ ಯಕ್ಷಗಾನ ಕೇಂದ್ರ, ಅದಮಾರು ಮಠ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಸಂಘಟಕರ ಪ್ರಕಟನೆ ತಿಳಿಸಿದೆ.