ಲೋಕಬಂಧು ನ್ಯೂಸ್ | ಉಡುಪಿ, ಏ.16
ಡಾ.ಅಂಬೇಡ್ಕರ್ ಜನ್ಮ ದಿನಾಚರಣೆ ಪ್ರಯುಕ್ತ ಅಂಬೇಡ್ಕರ್ ಯುವಸೇನೆ, ದಸಂಸ, ಎಸ್.ಸಿ-ಎಸ್.ಟಿ ಗುತ್ತಿಗೆದಾರರ ಸಂಘ ಮತ್ತು ಬೋವಿ ವಡ್ಡರ್ ಕ್ಷೇಮಾಭಿವೃದ್ಧಿ ಸಂಘ ಆಶ್ರಯದಲ್ಲಿ ಏರ್ಪಡಿಸಿದ ಭೀಮಯಾನ ರ್ಯಾಲಿಯಲ್ಲಿ ನಗರದುದ್ದಕ್ಕೂ ನೀಲಿ ಬಾವುಟದ ಮೆರುಗು ತುಂಬಿತ್ತು.
ಅಂಬೇಡ್ಕರ್ ಭಾವಚಿತ್ರವನ್ನು ಸಿಂಗಾರಗೊಂಡ ರಥದ ಜೊತೆಗೆ ಚೆಂಡೆ, ನಾಸಿಕ್ ಬ್ಯಾಂಡ್, ವಿವಿಧ ಬಗೆಯ ಟ್ಯಾಬ್ಲೊ ವಾಹನ ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಬೈಕ್, ಕಾರು, ರಿಕ್ಷಾ ಮತ್ತು ಜೀಪ್'ಗಳಿಗೆ ನೀಲಿ ಬಾವುಟ ಕಟ್ಟಿ ಮಲ್ಪೆಯಿಂದ ಉಡುಪಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚಾರಿಸಿ ಅಜ್ಜರಕಾಡು ಭುಜಂಗ ಪಾರ್ಕ್‌ನಲ್ಲಿ ಸಮಾಪನಗೊಂಡಿತು.
ಮಲ್ಪೆ ವಡಭಾಂಡೇಶ್ವರದಿಂದ ಹೊರಟ ಭೀಮಯಾನ ವಾಹನ ರ್ಯಾಲಿಯನ್ನು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ, ಸಂಧ್ಯಾ ತಿಲಕ್, ಸಮಾಜ ಸೇವಕ ಶಶಿಧರ್, ಮಲ್ಪೆ ಠಾಣಾಧಿಕಾರಿ ಅನಿಲ್ ಕುಮಾರ್, ಬಾಲಕೃಷ್ಣ, ನಿವೃತ್ತ ಪ್ರಿನ್ಸಿಪಾಲ್ ಜಗದೀಶ್ ಪರ್ಕಳ, ಹರೀಶ್ ಸಾಲ್ಯಾನ್ ಮೊದಲಾದವರು ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಯುವಸೇನೆ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ, ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ವಾಸುದೇವ ಮುದ್ದೂರು, ಎಸ್.ಸಿ.-ಎಸ್.ಟಿ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಪರಮೇಶ್ವರ ಉಪ್ಪೂರು, ಬೋವಿ ವಡ್ಡರ್ ಕ್ಷೇಮಾಭಿವೃದ್ಧಿ ಸಂಘದ ಈಶ್ವರ ಮತ್ತು ಶಿವಕುಮಾರ್ ಪರ್ಕಳ ಉಪಸ್ಥಿತರಿದ್ದರು.
ದಲಿತ ಮುಖಂಡರಾದ ದಯಾಕರ ಮಲ್ಪೆ, ಪ್ರಸಾದ್ ನೆರ್ಗಿ, ಸುಶೀಲ್ ಕೊಡವೂರು, ಸಂತೋಷ್ ಕಪ್ಪೆಟ್ಟು, ಕಮಲಾಕ್ಷ ಚೇರ್ಕಾಡಿ, ನಾರಾಯಣ ಪರ್ಕಳ, ಪ್ರವೀಣ್ ಕುದ್ರಿಪದವು, ಉಮೇಶ್ ಬೈಂದೂರು, ಭಾಸ್ಕರ್ ನಾಯ್ಕ, ಆನಂದ ಬೆಳ್ಳಾರೆ, ರಾಮ ನಾಯ್ಕ, ಲಕ್ಷ್ಮಣ ಬೈಂದೂರು, ರಾಮ ಮೈಯಾಡಿ, ನವೀನ ಬನ್ನಂಜೆ ಮೊದಲಾದವರು ಭಾಗವಹಿಸಿದ್ದರು.
ಸಮಾರೋಪ ಸಮಾರಂಭದಲ್ಲಿ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ, ಉಡುಪಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್, ನಗರಸಭೆ ಮಾಜಿ ಸದಸ್ಯೆ ಅಮೃತಾ ಕೃಷ್ಣಮೂರ್ತಿ, ಶೇಖರ ಪೂಜಾರಿ, ರಾಘವೇಂದ್ರ ನಾಯ್ಕ ಮೊದಲಾದವರು ಭಾಗವಹಿಸಿದ್ದರು.
ದಯಾಕರ ಸ್ವಾಗತಿಸಿ, ಸುಕೇಶ್ ನಿಟ್ಟೂರು ವಂದಿಸಿದರು.
