ಇಂದ್ರಾಣಿ ದೇವಳಕ್ಕೆ ಡಾ.ಜಿ.ಶಂಕರ್ ಭೇಟಿ

ಲೋಕಬಂಧು ನ್ಯೂಸ್ ಉಡುಪಿ
ಅಷ್ಟಬಂಧ ಬ್ರಹ್ಮಕುಂಭಾಭಿಷೇಕ ಸಂದರ್ಭದಲ್ಲಿ ಇಂದ್ರಾಣಿ ಶ್ರೀ ಮುಖ್ಯಪ್ರಾಣ ಶ್ರೀ ನಾಗದೇವರ ಸನ್ನಿಧಿಗೆ ಉಚ್ಚಿಲ‌ ಶ್ರೀ ಮಹಾಲಕ್ಷ್ಮಿ ದೇವಳದ ಗೌರವ ಸಲಹೆಗಾರ ನಾಡೋಜ ಡಾ‌‌. ಜಿ.ಶಂಕರ್ ಭೇಟಿ ನೀಡಿ, ದೇವರ ದರ್ಶನ ಪಡೆದರು.ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅವರು ಜಿ.ಶಂಕರ್ ಅವರನ್ನು ಗೌರವಾದರಪೂರ್ವಕವಾಗಿ ಬರಮಾಡಿಕೊಂಡರು.


ದೇವಳ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಭೂಪತಿ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರತ್ನಾಕರ ಇಂದ್ರಾಳಿ ಮೊದಲಾದವರಿದ್ದರು.