ಲೋಕಬಂಧು ನ್ಯೂಸ್ | ಉಡುಪಿ, ಏ.5
ಭಾರತ ವೈಜ್ಞಾನಿಕವಾಗಿ ಸಾಧನಾ ಮಾರ್ಗದಲ್ಲಿದ್ದು, ಮುಂದಿನ ಭಾರತವರ್ಷವನ್ನು ವೈಜ್ಞಾನಿಕವಾಗಿ ಯಾವ ರೀತಿ ಬೆಳೆಸಬೇಕು ಎಂದು ಸಮ್ಮೇಳನದಿಂದ ಅರಿತುಕೊಳ್ಳಬೇಕು ಎಂದು ಬ್ರಹ್ಮೋಸ್ ಕ್ಷಿಪಣಿ ತಯಾರಿ ಖ್ಯಾತಿಯ ವಿಜ್ಞಾನಿ ಪದ್ಮಶ್ರೀ ಪುರಸ್ಕೃತ ಡಾ.ಪ್ರಹ್ಲಾದ ರಾಮ ರಾವ್ ಹೇಳಿದರು.
ಇಲ್ಲಿನ ಪೂರ್ಣಪ್ರಜ್ಞ ಕಾಲೇಜು (ಸ್ವಾಯತ್ತ) ಐಕ್ಯುಎಸಿ ಹಾಗೂ ವಿಜ್ಞಾನ ಸಂಘ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ, ತಂತ್ರಜ್ಞಾನ ಹಾಗೂ ವಿಜ್ಞಾನಿಗಳ ಸಮ್ಮೇಳನದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಸ್ರೋ ಮಾಜಿ ವಿಜ್ಞಾನಿ ಡಾ.ಬಿ.ಆರ್.ಗುರುಪ್ರಸಾದ್ ಅವರು ಶ್ರೀಹರಿಕೋಟಾದಲ್ಲಿ ರಾಕೆಟ್ ಉಡಾವಣೆ ರೀತಿ, ವಿಶಿಷ್ಟತೆಯನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.
ಬೆಂಗಳೂರಿನ ಜೆಎನ್.ಎಎಸ್ಆರ್. ಸಂಶೋಧಕ ಡಾ.ವಿನಾಯಕ ಕೆ .ಪತ್ತಾರ್ ಅವರು ರಾಸಾಯನಿಕಗಳ ವಿವಿಧ ವೈಜ್ಞಾನಿಕ ಕುತೂಹಲ ಹಾಗೂ ಕೋಲ್ಡ್ ಪ್ಯೂಸನ್ ಆಗುವ ರೀತಿಯನ್ನು ಪ್ರದರ್ಶಿಸಿದರು. ಅದಮಾರು ಮಠದ ಶಿಕ್ಷಣ ಮಂಡಳಿ ಗೌರವ ಕಾರ್ಯದರ್ಶಿ ಡಾ.ಎ.ಪಿ.ಭಟ್, ಕಾರ್ಯದರ್ಶಿ ಡಾ.ಜಿ.ಎಸ್.ಚಂದ್ರಶೇಖರ್, ಅಕಾಡೆಮಿ ನಿರ್ದೇಶಕ ಡಾ.ಪಿ.ಎಸ್.ಐತಾಳ್ ಉಪಸ್ಥಿತರಿದ್ದರು.
ಅದಮಾರು ಮಠ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಸಾಧಕ ವಿಜ್ಞಾನಿ ಹಾಗೂ ಪೂರ್ಣಪ್ರಜ್ಞ ಕಾಲೇಜಿನ ಮಾಜಿ ಪ್ರಾಂಶುಪಾಲ ಪ್ರೊ.ಎನ್.ಎ.ಮಧ್ಯಸ್ಥ ಅವರನ್ನು ಸನ್ಮಾನಿಸಿದರು. ಚಿನ್ಮಯಿ ರಾವ್, ನಿಹಾರಿಕಾ ಪ್ರಾರ್ಥಿಸಿದರು. ಪ್ರಾಂಶುಪಾಲ ರಾಮು ಎಲ್. ಸ್ವಾಗತಿಸಿದರು. ಪ್ರತೀಕ್ಷಾ ಅತಿಥಿಗಳನ್ನು ಪರಿಚಯಿಸಿದರು. ಡಾ.ವಿನಯ ಕುಮಾರ್ ಡಿ. ವಂದಿಸಿದರು. ಸ್ನೇಹಲತಾ ಶೆಟ್ಟಿಗಾರ್ ನಿರ್ವಹಿಸಿದರು.
ಸಾನಿಧ್ಯ ವಹಿಸಿದ್ದ ಅದಮಾರು ಮಠ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಶ್ರೀ ವಿಬುಧೇಶತೀರ್ಥರ ಆಶೀರ್ವಾದದಿಂದ ನಮಗೆ ವಿಜ್ಞಾನಿಗಳೊಂದಿಗೆ ಮಾತನಾಡಿ, ವೈಜ್ಞಾನಿಕ ವಿಚಾರ ಅರಿಯಲು ಸಾಧ್ಯವಾಗುತ್ತಿದೆ. ನಮ್ಮ ಕಾಲ, ಬುದ್ದಿಯ ಮಿತಿಯೂ ಚಿಕ್ಕದಿದೆ. ಹಾಗಾಗಿ ಹೊಸತನ ತಿಳಿಯುವುದರಿಂದ ಸಂತಸ ಲಭಿಸುತ್ತದೆ. ಯುವ ಸಮುದಾಯ ಜ್ಞಾನ ವರ್ಧನೆಗೆ ಯತ್ನಿಸಬೇಕು ಎಂದರು.

.jpg)
.jpg)