ಭೀಮ್ ಯಾನಕ್ಕೆ ಚಾಲನೆ

ಲೋಕಬಂಧು ನ್ಯೂಸ್ | ಉಡುಪಿ, ಏ.14
ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ 135ನೇ ಜನ್ಮದಿನ ಅಂಗವಾಗಿ ಮಂಗಳವಾರ ಆಯೋಜಿಸಲಾದ ಭೀಮ್ ಯಾನ ರ್ಯಾಲಿಗೆ ಪರ್ಕಳದಲ್ಕಿ ನಗರಸಭೆ ಮಾಜಿ ಅಧ್ಯಕ್ಷೆ ಸುಮಿತ್ರಾ ನಾಯಕ್ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಕಾಂಗ್ರೆಸ್‌ನ ಹಿರಿಯ ಮುಖಂಡ ಮೋಹನದಾಸ್ ನಾಯಕ್ ಮೆರವಣಿಗೆಗೆ ಚಾಲನೆ ನೀಡಿದರು.
ಸ್ಥಳೀಯ ಉದ್ಯಮಿ ಸಂದೀಪ್ ಶೆಟ್ಟಿ ಬಡಗಬೆಟ್ಟು, ಎಸ್‌ಸಿ ಎಸ್.ಟಿ ಗುತ್ತಿಗೆದಾರರ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಯು. ಪರಮೇಶ್ವರ್ ಉಪ್ಪೂರು, ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೆಬೆಟ್ಟು, ಕರ್ನಾಟಕ ಬೋವಿ ಅಂಬೇಡ್ಕರ್ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ರಾಜಕುಮಾರ್ ಪೆರ್ಣಂಕಿಲ, ನಾರಾಯಣ ಪರ್ಕಳ, ಜಗದೀಶ್ ಪರ್ಕಳ, ಶಿವಕುಮಾರ್, ಭೋವಿ ಸಮಾಜದ  ಮುಂದಾಳು ಸಂದೇಶ್ ಕುಮಾರ್ ಪೆರ್ಡೂರು, ಯುವ ಭೋವಿ ಸಮಾಜದ  ಜಿಲ್ಲಾಧ್ಯಕ್ಷ ನಾಗರಾಜ್ ಕುಕ್ಕದಕಟ್ಟೆ ಮೊದಲಾದವರಿದ್ದರು.