ಲೋಕಬಂಧು ನ್ಯೂಸ್ | ಉಡುಪಿ, ಏ.5
ಹಿರಿಯಡಕ ಪರಿಸರದ ಪ್ರಕೃತಿ ಸೌಂದರ್ಯದ ರಮಣೀಯ ತಾಣ, ರಾಷ್ಟ್ರೀಯ ಹೆದ್ದಾರಿ ಸನಿಹದಲ್ಲಿ ಸುಮಾರು ವಿಶಾಲ 5 ಎಕರೆ ವಿಶಾಲ ಪ್ರದೇಶದಲ್ಲಿ ತಲೆ ಎತ್ತಿರುವ ಒಂದೇ ಸೂರಿನಡಿಯಲ್ಲಿ ಅತ್ಯಾಧುನಿಕ ಸೌಕರ್ಯಗಳನ್ನೊಳಗೊಂಡ ಸುಸಜ್ಜಿತ ಹಾಗೂ ಸಂಪೂರ್ಣ ಹವಾನಿಯಂತ್ರಿತ ಉಡುಪಿ ಕೋಸ್ಟಲ್ ವುಡ್ ರೆಸಾರ್ಟ್ಸ್ ಸಹಸಂಸ್ಥೆ ಶ್ಯಾಮಿಲಿ ಸ್ಪ್ರಿಂಗ್ಸ್ ಏಪ್ರಿಲ್ 7ರಂದು ಉದ್ಘಾಟನೆಗೊಳ್ಳಲಿದೆ.
ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ ಕನ್ವೆನ್ಷನ್ ಸೆಂಟರ್‌ನ್ನು ಕೈಗೆಟುಕುವ ದರದಲ್ಲಿ ಲಭ್ಯವಾಗಬೇಕೆನ್ನುವ ನಿಟ್ಟಿನಲ್ಲಿ ನಾಡೋಜ ಡಾ.ಜಿ. ಶಂಕರ್ ಅವರ ಕನಸಿನ ಯೋಜನೆ ಶ್ಯಾಮಿಲಿ ಸ್ಪ್ರಿಂಗ್ಸ್ ನಿರ್ಮಿಸಲಾಗಿದೆ. ಮದುವೆ, ಸೀಮಂತ, ಸಭೆ, ಸಮಾರಂಭ, ಕಾರ್ಪೊರೇಟ್ ವಲಯದ ಮೀಟಿಂಗ್, ಪಾರ್ಟಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗಿದೆ.
ವಿಶಾಲ ಭೂ ಪ್ರದೇಶದಲ್ಲಿ ಪಾರ್ಕಿಂಗ್, ಮಕ್ಕಳ ಆಟದ ಮೈದಾನ, ತೆರೆದ ಸಭಾಂಗಣ ಒಳಗೊಂಡಿರುವ ಶ್ಯಾಮಿಲಿ ಸ್ಪ್ರಿಂಗ್ಸ್, ರಾಯಲ್ ಲುಕ್ ನೀಡುತ್ತಿದ್ದು ಆಕರ್ಷಣೀಯ ಸ್ಥಳವಾಗಿದೆ. ಸಂಪೂರ್ಣ ಹವಾನಿಯಂತ್ರಿತ 1,000 ಮಂದಿ ಆಸೀನರಾಗಲು ಬೇಕಾದ ವ್ಯವಸ್ಥೆಯುಳ್ಳ ಶಾನ್ವಿಕ ಕನ್ವೆನ್ಷನ್ ಸೆಂಟರ್, ಊಟಕ್ಕೆ ಪ್ರತ್ಯೇಕವಾಗಿರುವ ಶನಾಯ ಗ್ರ್ಯಾಂಡ್ ಹಾಲ್'ಗಳಿವೆ. ಸಸ್ಯಾಹಾರಿ ಹಾಗೂ ಮಾಂಸಾಹಾರಿ ಅಡುಗೆ ತಯಾರಿಗೆ ಪ್ರತ್ಯೇಕ ಅಡುಗೆ ಕೋಣೆ ಸೌಲಭ್ಯವಿದೆ. ಸಭಾಂಗಣದ ಸನಿಹದಲ್ಲೇ ಅನುಗ್ರಹದಾತ ಶ್ರೀಪ್ರಸನ್ನ ಗಣಪತಿ ಮಂದಿರ ಇದೆ.
ಶ್ಯಾಮಿಲಿ ಗ್ರೀನ್ಸ್ ಓಪನ್ ಗಾರ್ಡನ್
ಮೆಹಂದಿ, ಹಳದಿ, ಗೋಧೂಳಿ ಲಗ್ನ ಸಹಿತ ಶುಭ ಸಮಾರಂಭಗಳಿಗೆ, ನೈಟ್ ಪಾರ್ಟಿಗೆ ಅನುಕೂಲವಾಗುವ ಮತ್ತು ಗ್ರ್ಯಾಂಡ್ ಲುಕ್ ನೀಡುವ ಶ್ಯಾಮಿಲಿ ಗ್ರೀನ್ಸ್ ಓಪನ್ ಗಾರ್ಡನ್ ಸಭಾಂಗಣವೂ ಇಲ್ಲಿದೆ. ವಿಶಾಲ ಪ್ರದೇಶದಲ್ಲಿರುವ ಓಪನ್ ಗಾರ್ಡನ್ ಆಕರ್ಷಣೀಯವಾಗಿದೆ. ವಿಶಾಲವಾದ ಊಟದ ಹಾಲ್, ವೆಜ್ ಮತ್ತು ನಾನ್ ವೆಜ್'ಗೆ ಪ್ರತ್ಯೇಕ ಅಡುಗೆ ಕೋಣೆ ವ್ಯವಸ್ಥೆ ಒಳಗೊಂಡಿದೆ. ಗ್ರಾಹಕರು ಇಚ್ಛಿಸುವ ಮಾದರಿಯಲ್ಲಿ ಈ ಓಪನ್ ಗಾರ್ಡನ್ ಸಭಾಂಗಣವಿದೆ.
30 ಎಸಿ ಡಿಲೆಕ್ಸ್ ರೂಮ್
ಶ್ಯಾಮಿಲಿ ಸ್ಪ್ರಿಂಗ್ಸ್ ಕೇವಲ ಸಭಾಂಗಣಕ್ಕಷ್ಟೇ ಸೀಮಿತವಾಗದೇ 30 ಎಸಿ ಡಿಲೆಕ್ಸ್ ರೂಮ್, 2 ಪ್ರತ್ಯೇಕ ವಿಲ್ಲಾಗಳನ್ನು ಒಳಗೊಂಡಿದೆ. ದೂರದ ಊರಿನಿಂದ ಆಗಮಿಸಿ ಉಳಿದುಕೊಂಡು ಮದುವೆ, ಸಮಾರಂಭಗಳನ್ನು ಮುಗಿಸಿ ತೆರಳುವುದಕ್ಕೂ ಇಲ್ಲಿ ವ್ಯವಸ್ಥೆ ಇದೆ. 300ಕ್ಕೂ ಅಧಿಕ ಕಾರುಗಳು ಪಾರ್ಕ್ ಮಾಡಲು ಬೇಕಾದ ವಿಶಾಲ ಪಾರ್ಕಿಂಗ್ ಏರಿಯಾ, ಸ್ವಿಮ್ಮಿಂಗ್ ಫೂಲ್, ರಿಕ್ರಿಯೇಶನ್ ಕ್ಲಬ್, ಜಿಮ್, ಮಕ್ಕಳ ಆಟದ ಮೈದಾನವೂ ಇದೆ. ಕಾರ್ಪೊರೇಟ್ ಸಂಸ್ಥೆಗಳ ಸಭೆ, ಸಮಾರಂಭಗಳಿಗೆ ಅನುಕೂಲವಾಗುವಂತೆ ಬೇಕಾದ ವ್ಯವಸ್ಥೆ ಜೋಡಿಸಿಕೊಳ್ಳಲಾಗಿದೆ. ಮೆಹಂದಿ, ಹಳದಿ, ಡೆಸ್ಟಿನೇಶನ್ ಮ್ಯಾರೇಜ್ ಸಹಿತ ಇನ್ನಿತರ ಶುಭ ಸಮಾರಂಭಗಳಿಗೆ ವ್ಯವಸ್ಥೆಗಳಿವೆ.
ಕೈಗೆಟುಕುವ ಬಾಡಿಗೆ ದರ
ಡಾ.ಜಿ.ಶಂಕರ್ ಅವರು ಅತ್ಯಾಧುನಿಕ ಸೌಕರ್ಯಗಳನ್ನು ಒಳಗೊಂಡಿರುವ ಹಾಲ್ ನಿರ್ಮಿಸಿದ್ದು, ಕೈಗೆಟುಕುವ ದರದಲ್ಲಿ ಸಭಾಂಗಣವನ್ನು ಬಾಡಿಗೆ ನೀಡಲಾಗುತ್ತಿದೆ. ಜನಸಾಮಾನ್ಯರ ಬಜೆಟ್‌ಗೆ ತಕ್ಕಂತೆ ಬಾಡಿಗೆ ನಿಗದಿ ಮಾಡಲಾಗಿದೆ. ಈಗಾಗಲೇ ಬುಕ್ಕಿಂಗ್ ಆರಂಭಗೊಂಡಿದ್ದು, 9448930820ನ್ನು ಸಂಪರ್ಕಿಸಬಹುದು.
ಅತ್ಯಾರ್ಷಕ ಪ್ರವೇಶ ದ್ವಾರ
ಹವಾನಿಯಂತ್ರಿತ ಶಾಮಿಲಿ ಸ್ಪ್ರಿಂಗ್ಸ್'ನ್ನು ಅತ್ಯಾರ್ಷಕವಾಗಿ ನಿರ್ಮಿಸಿದ್ದು, ಸಭಾಂಗಣಕ್ಕೆ ಪ್ರವೇಶಿಸುವ ಪ್ರವೇಶ ದ್ವಾರ ಕಣ್ಮನ ಸೆಳೆಯುತ್ತಿದೆ. ಕರಕುಶಲ ಕರ್ಮಿಗಳಿಂದ ಕಸುರಿ ಕೆಲಸ ಮಾಡಿದ್ದು, ಗತವೈಭವ ನೆನಪಿಸುವ ಪ್ರವೇಶ ದ್ವಾರಗಳು ವಿಶೇಷ ಅನುಭವ ನೀಡಲಿದೆ. ಶಾಮಿಲಿ ಸ್ಪ್ರಿಂಗ್ಸ್'ನಲ್ಲಿ ಫ್ಯಾಮಿಲಿ ರೆಸ್ಟೋರೆಂಟ್ ಕೂಡಾ ಇದೆ.
ಅತ್ಯಾಧುನಿಕ ಸೌಲಭ್ಯ ಒಳಗೊಂಡಿರುವ ಕನ್ವೆನ್ಷನ್ ಸೆಂಟರ್ ಜನಸಾಮಾನ್ಯರಿಗೂ ಕೈಗೆಟುಕುವ ದರದಲ್ಲಿ ಲಭಿಸಬೇಕೆನ್ನುವ ನಿಟ್ಟಿನಲ್ಲಿ ಶ್ಯಾಮಿಲಿ ಸ್ಪ್ರಿಂಗ್ಸ್ ನಿರ್ಮಾಣ ಮಾಡಲಾಗಿದೆ. ಮದುವೆ, ಸೀಮಂತ, ಸಭೆ, ಸಮಾರಂಭ, ಕಾರ್ಪೊರೇಟ್ ವಲಯದ ಮೀಟಿಂಗ್, ಪಾರ್ಟಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಯೋಜನೆ ಕಾರ್ಯರೂಪಕ್ಕೆ ತರಲಾಗಿದೆ. ವಿಶಾಲ ಭೂ ಪ್ರದೇಶದಲ್ಲಿ ಪಾರ್ಕಿಂಗ್, ಮಕ್ಕಳ ಆಟದ ಮೈದಾನ, ತೆರೆದ ಸಭಾಂಗಣ ಒಳಗೊಂಡಿರುವ ಶ್ಯಾಮಿಲಿ ಸ್ಪ್ರಿಂಗ್ಸ್ ರಾಯಲ್ ಲುಕ್ ನೀಡುತ್ತಿದ್ದು, ಆಕರ್ಷಣೀಯ ಸ್ಥಳವಾಗಿದೆ.-ಡಾ.ಜಿ.ಶಂಕರ್, ಆಡಳಿತ ನಿರ್ದೇಶಕರು, ಶ್ಯಾಮಿಲಿ ಸ್ಪ್ರಿಂಗ್ಸ್, ಹಿರಿಯಡಕ, ಉಡುಪಿ


