ಲೋಕಬಂಧು ನ್ಯೂಸ್ | ಉಡುಪಿ, ಏ.15
ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರ ನೇತೃತ್ವದಲ್ಲಿ ಸುವರ್ಣ ರಥೋತ್ಸವ ನಡೆಯಿತು. ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು, ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಕಾಣಿಯೂರು ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಉತ್ಸವದಲ್ಲಿ ಭಾಗವಹಿಸಿದ್ದರು.
ಪಂಚಾಂಗ ಶ್ರವಣ
ಬಳಿಕ ಶ್ರೀಕೃಷ್ಣ ದೇವರ ಮುಂಭಾಗ ಚಂದ್ರಶಾಲೆಯಲ್ಲಿ ನೂತನ `ಪರಾಭವ' ಸಂವತ್ಸರದ ಪಂಚಾಂಗ ಶ್ರವಣ ನಡೆದಿದ್ದು, ಪರ್ಯಾಯ ಶೀರೂರು ಮಠದ ಪುರೋಹಿತ ಸುದರ್ಶನ ಆಚಾರ್ಯ ಪಂಚಾಂಗ ವಾಚನ ನಡೆಸಿದರು.ಮಠದ ದಿವಾನ ಡಾ.ಉದಯಕುಮಾರ ಸರಳತ್ತಾಯ ಮೊದಲಾದವರಿದ್ದರು.
ಜಿಲ್ಲೆಯಲ್ಲಿ ಸೌರಮಾನ ಯುಗಾದಿ ಆಚರಿಸಲಾಗಿದ್ದು, ತುಳುನಾಡಿನಲ್ಲಿ ಆ ಮೂಲಕ ಹೊಸ ವರ್ಷಾಚರಣೆ ಮಾಡಲಾಯಿತು. ಬಹುತೇಕ ಮಂದಿ ತಮ್ಮ ಮನೆಗಳಲ್ಲಿ ವಿಷು ಕಣಿ ದರ್ಶನ ಮಾಡಿ, ದೇವರ ದರ್ಶನಗೈದು ಹೊಸ ಬಟ್ಟೆಯುಟ್ಟು ಹಬ್ಬದೂಟ ಸವಿದರು.
ಕೆಲವು ದೇವಳಗಳಲ್ಲಿ ಯುಗಾದಿ ವಿಶೇಷ ಪೂಜೆ, ಉತ್ಸವ ನಡೆಯಿತು.
.jpg)
.jpg)
.jpg)
.jpg)
.jpg)
.jpg)