ಲೋಕಬಂಧು ನ್ಯೂಸ್ | ಉಡುಪಿ, ಏ.16
ವಿಶ್ವ ಕಲಾ ದಿನಾಚರಣೆ ಪ್ರಯುಕ್ತ ಗುರುವಾರ ಮಣಿಪಾಲದ ತ್ರಿವರ್ಣ ಆರ್ಟ್ ಕ್ಲಾಸ್ಸಸ್ ಮತ್ತು ಗ್ಯಾಲರಿ ವಿದ್ಯಾರ್ಥಿಗಳಾದ ಪ್ರಣತಿ ಬಿ. ಶೆಟ್ಟಿ, ಸುಪರ್ಣ ಸುವರ್ಣ ಮತ್ತು ಸ್ಮೃತಿ ಪಿ. ತುಂಗ ಬಟ್ಟೆಯಲ್ಲಿ ಬುದ್ಧನ 50 ಚದರ ಅಡಿ ವಿಸ್ತೀರ್ಣದ ಕಲಾಕೃತಿ ರಚಿಸಿದರು.
ಕಾರ್ಯಕ್ರಮವನ್ನು ಬೆನಕ ಆರ್ಟ್ಸ್ ಮತ್ತು ಕ್ರಾಫ್ಟ್ ಮಾಲಕ ಹರ್ಷವರ್ಧನ ಭಟ್ ಉದ್ಘಾಟಿಸಿದರು.
ಶೆಫಿನ್ಸ್ ಉಡುಪಿ ನಿರ್ದೇಶಕ ಮನೋಜ್ ಕಡಬ, ಸಾಮಾಜಿಕ ಕಾರ್ಯಕರ್ತ ಗಣೇಶರಾಜ್ ಸರಳಬೆಟ್ಟು ಇದ್ದರು.
ಕಲಾ ಕೇಂದ್ರದ ಮಾರ್ಗದರ್ಶಕ ಹರೀಶ್ ಸಾಗಾ ಸ್ವಾಗತಿಸಿದರು. ಕೃತಿ ಕೆ. ದೇವಾಡಿಗ ನಿರೂಪಿಸಿ, ವಂದಿಸಿದರು.
.jpg)