ಕೊಡವೂರು ಮಹಾರುದ್ರಯಾಗ ಯಶಸ್ಸಿಗೆ ಸಚಿವ ಭೋಸರಾಜ್ ಹಾರೈಕೆ

ಲೋಕಬಂಧು ನ್ಯೂಸ್ | ಉಡುಪಿ, ಮೇ 14
ಜಿಲ್ಲಾ ಪ್ರವಾಸದಲ್ಲಿದ್ದ ರಾಜ್ಯ ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್. ಭೋಸರಾಜ್ ಅವರನ್ನು ಕಾಂಗ್ರೆಸ್ ಮುಂದಾಳು ಹಾಗೂ ಉದ್ಯಮಿ ಪ್ರಸಾದ್ ರಾಜ್ ಕಾಂಚನ್ ಅವರು ಬುಧವಾರ ನಗರದ ಪ್ರವಾಸಿ ಮಂದಿರದಲ್ಲಿ ಭೇಟಿಯಾಗಿ ಕೊಡವೂರು ಮಹಾರುದ್ರಯಾಗ ಪುಣ್ಯೋತ್ಸವದ ಆಮಂತ್ರಣ ಪತ್ರಿಕೆ ನೀಡಿ ಆಮಂತ್ರಿಸಿದರು.
ಸರ್ವರ ಹಿತಕ್ಕಾಗಿ ಲೋಕಕಲ್ಯಾಣಾರ್ಥವಾಗಿ ತನ್ನ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ಅದ್ದೂರಿ ಮಹಾರುದ್ರಯಾಗದ ಬಗ್ಗೆ ವಿವರಿಸಿದ ಪ್ರಸಾದ್ ರಾಜ್ ಕಾಂಚನ್, ಪುಣ್ಯ ಕಾರ್ಯಕ್ಕೆ ಆಗಮಿಸುವಂತೆ  ವಿನಂತಿಸಿದರು.


ಅಪೂರ್ವವಾದ ಈ ಧಾರ್ಮಿಕ ಕಾರ್ಯಕ್ರಮದ ಕುರಿತು ವಿಶೇಷ ಆಸಕ್ತಿ ವಹಿಸಿ ಸಚಿವ ಭೋಸರಾಜ್ ಮಾಹಿತಿ ವಿಚಾರಿಸಿದಲ್ಲದೆ, ಕಾರ್ಯಕ್ರಮಕ್ಕೆ ಪೂರ್ಣ ಯಶಸ್ಸು ಸಿಗಲೆಂದು ಶುಭ ಹಾರೈಸಿದರು.