ಹವ್ಯಾಸಿ ಯಕ್ಷಗಾನ ಕಲಾವಿದ ಗುಂಡ್ಮಿ ಕರುಣಾಕರ ಶೇರಿಗಾರ್ ನಿಧನ

ಲೋಕಬಂಧು ನ್ಯೂಸ್ | ಬ್ರಹ್ಮಾವರ, ಜು.7
ಕೋಟ ಸಾಸ್ತಾನದ ಗುಂಡ್ಮಿ ನಿವಾಸಿ ಉದ್ಯಮಿ ಕರುಣಾಕರ ಶೇರಿಗಾರ (68) ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ನಿಧನರಾದರು.
ಹವ್ಯಾಸಿ ಯಕ್ಷಗಾನ ಕಲಾವಿದರಾದ ಅವರು ಭೀಷ್ಮ, ಭಸ್ಮಾಸುರ, ಕರ್ಣ, ಪರಶುರಾಮ ಮೊದಲಾದ ಪಾತ್ರಗಳನ್ನು ಮಾಡಿ ಗಮನ ಸೆಳೆದಿದ್ದರು. ಪ್ರಸಿದ್ಧ ಭಾಗವತರಾದ ಕಾಳಿಂಗ ನಾವುಡರ ಅಭಿಮಾನಿಯೂ, ಆತ್ಮೀಯ ಒಡನಾಡಿಯೂ ಆಗಿದ್ದರು. ವಿದೇಶಗಳಲ್ಲೂ ಹಲವು ಪ್ರದರ್ಶನ ನೀಡಿದ್ದ ಅವರು ಪ್ರಿಂಟಿಂಗ್ ಲ್ಯಾಬ್ ಸೇರಿದಂತೆ ಹಲವು ಉದ್ಯಮಗಳಲ್ಲಿ ತೊಡಗಿಕೊಂಡಿದ್ದರು.


ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.


ಉಡುಪಿ ಯಕ್ಷಗಾನ ಕಲಾರಂಗದ ಆಜೀವ ಸದಸ್ಯರಾಗಿದ್ದ ಅವರ ನಿಧನಕ್ಕೆ ಸಂಸ್ಥೆ ಅಧ್ಯಕ್ಷ ಎಂ.ಗಂಗಾಧರ ರಾವ್ ಮತ್ತು ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.