ಉದ್ಯಮಿಯ ದರೋಡೆ ಪ್ರಕರಣ: ಮೂವರ ಬಂಧನ

ಲೋಕಬಂಧು ನ್ಯೂಸ್ | ಮಂಗಳೂರು, ಜು.3
ಕಳೆದ ಜೂ.29ರಂದು ನಸುಕಿನ ವೇಳೆ ಬೈಕಂಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ವರ್ಣೋದ್ಯಮಿಯೋರ್ವರ ಚಿನ್ನಾಭರಣಗಳನ್ನು ದರೋಡೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಕರಣದಲ್ಲಿ ಭಾಗಿಯಾಗಿದ್ದ ಒಟ್ಟು 16 ಆರೋಪಿಗಳ ಪೈಕಿ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


ಕೇರಳದ ಕಣ್ಣೂರು ಜಿಲ್ಲೆಯ ನಿಮಿಲ್ ಆರ್.ಕೆ (37) ಹಾಗೂ ಮಡಿಕೇರಿಯ ಇರ್ಷಾದ್ (40) ಮತ್ತು ಮುಸ್ತಾಫಾ (49) ಬಂಧಿತರು.


ಉದ್ಯಮಿ ವಿಕಾಸ್ ಸುಬ್ಬರಾವ್ ಧನವಡೆ ಮಹಾರಾಷ್ಟ್ರದಿಂದ ಕೇರಳದ ಪಯ್ಯನ್ನೂರಿಗೆ ತಮ್ಮ ಕುಟುಂಬದೊಂದಿಗೆ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಬೈಕಂಪಾಡಿ ಸಮೀಪ ದರೋಡೆ ಮಾಡಲಾಗಿತ್ತು.


ಸದ್ಯ ಮೂವರನ್ನು ಬಂಧಿಸಿದ್ದು ಉಳಿದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.